ಜಿಲ್ಲೆ

ಅಲೆಮಾರಿ ಸಮುದಾಯಗಳ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

ಹಾಸನ : ಅಲೆಮಾರಿ ಸಮುದಾಯಗಳು ತಮ್ಮ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದರು ಇನ್ನು ಹಿಂದೆಯೇ ಉಳಿದಿದ್ದೇವೆ ಹಾಗಾಗಿ ತಮ್ಮ ಸಮುದಾಯದವರ ಅಭಿವೃದ್ಧಿ ಹಾಗೂ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಎಸ್‌ಸಿ, ಎಸ್‌ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಸಂಘಟನೆಯ ಅಧ್ಯಕ್ಷ ಲಿಂಗರಾಜು ಮನವಿ ಮಾಡಿದರು

ಒಟ್ಟು 74 ಅಲೆಮಾರಿ ಸಮುದಾಯಗಳು ಎಲ್ಲಾ ಕೇತ್ರಗಳಲ್ಲಿ ಅಭಿವದ್ಧಿಯಿಂದ ವಂಚಿತರಾಗಿ, ಪಾರಂಪರಿಕ ವತ್ತಿಗಳನ್ನು ಅವಲಂಬಿಸಿ ವಸತಿ ಇಲ್ಲದೆ ಅನೇಕ ಸಮಸ್ಯೆಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತ ಪಡಿಸಿದರು.

ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಾಗಿರುವ ಪ.ಜಾತಿಯ ಅಲೆಮಾರಿ. ಅರೆಅಲೆಮಾರಿ, ವಿಮುಕ್ತ ಅಲೆಮಾರಿ, ಹಂದಿಜೋಗಿ, ಸಿಳ್ಳೆಕ್ಯಾತಾಸ್, ಬುಡ್ಗ ಜಂಗಮ ಸೇರಿದಂತೆ ಹಾಗೂ ಪರಿಶಿಷ್ಟ ವರ್ಗದ ಪಾರ‌್ಥಿ, ಚೆಂಚು, ಗುಡಿಸಲು, ಹಾಡಿ, ಸೇರಿದಂತೆ ಸುಮಾರು ಒಟ್ಟು 74 ಅಲೆಮಾರಿ ಎಸ್‌ಸಿ, ಎಸ್‌ಟಿ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳು 70 ವರ್ಷಗಳಿಂದ ನಿರ್ಲಕ್ಷೃಕ್ಕೆ ಒಳಪಟ್ಟು ಎಲ್ಲಾ ಕೇತ್ರಗಳಲ್ಲಿ ಅಭಿವದ್ಧಿಯಿಂದ ವಂಚಿತರಾಗಿ, ಪಾರಂಪರಿಕ ವತ್ತಿಗಳನ್ನು ಅವಲಂಬಿಸಿ ವಸತಿ ಇಲ್ಲದೆ ಅನೇಕ ಸಮಸ್ಯೆಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ಪ.ಜಾತಿ ಮತ್ತು ಪಂಗಡದವರಿಗೆ ಅಲೆಮಾರಿ ವಿಮುಕ್ತ ವಸತಿ ಯೋಜನೆಗೆ ಮೀಸಲಿಟ್ಟಿದ್ದ 2021-22 ಸಾಲಿನಲ್ಲಿ 250 ಕೋಟಿ, 2022-23 ರಲ್ಲಿ 300 ಕೋಟಿ ಅನುದಾನವನ್ನು ಗೋಷಣೆ ಮಾಡಿದ್ದು ಸರಿಯಷ್ಟೆ, ಆದರೆ ಆರ್ಥಿಕ ಇಲಾಖೆ ಮುಂದುವರೆದ ವಸತಿ ಕಾಮಗಾರಿಗಳಿಗೆ ಅನುದಾನವನ್ನು ವರ್ಗಾವಣೆ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಅಲೆಮಾರಿ, ಅರೆಅಲೆಮಾರಿ ಸಮುದಾಯದ ಅರ್ಜಿ ಸಲ್ಲಿಸಿರುವ 14 ಸಾವಿರ ವಸತಿರಹಿತರಿಗೆ ಮನೆ ನಿರ್ಮಾಣ ಮಾಡಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಆರ್ ಲೋಕೇಶ್, ಉಪಾಧ್ಯಕ್ಷ ಎ ಎಂ. ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಕೆ ತಿಮ್ಮಪ್ಪ, ಸೇರಿದಂತೆ ಇತರರು ಇದ್ದರು.