ಜಿಲ್ಲೆ

ಅಲಕ್ಷಿತ ಲೋಕದ ಸಂಕಥನವಿದೆ

ಬಳ್ಳಾರಿ : ಡಂಕಲ್ ಪೇಟೆ ಕಥಾ ಸಂಕಲನದಲ್ಲಿ ಅಲಕ್ಷಿತ ಲೋಕದ ಸಂಕಥನವೊಂದು ವಿಶಿಷ್ಟವಾಗಿ ತೆರೆದುಕೊಂಡಿದೆ ಎಂದು ಸಹ ಪ್ರಾಧ್ಯಾಪಕಿ ಡಾ.ಬಿ.ಜಿ.ಕಲಾವತಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕಸಾಪ ಹಾಗೂ ವಿಜಯ ಬುಕ್ಸ್ ಜಂಟಿಯಾಗಿ ಆಯೋಜಿಸಿದ್ದ ವೀರೇಂದ್ರ ರಾವಿಹಾಳ್ ಅವರ ಡಂಕಲ್ ಪೇಟೆ ಕಥಾ ಸಂಕಲನದ “ಹೊಸ ಓದು” ಕಾರ್ಯಕ್ರಮದಲ್ಲಿ ಮಾತನಾಡಿದರು. ಕಥೆ ದುಃಖಕ್ಕೆ ಹೊರತು ಸುಖಕ್ಕೆ ಅಲ್ಲ. ಕತೆಗಾರನ ಹೆಚ್ಚುಗಾರಿಕೆ ಇರುವುದು ಇರುವುದನ್ನು ಹೇಳುವುದರಲ್ಲಿ ಅಲ್ಲ. ಇರದೇ ಇರುವುದನ್ನು ರೂಪಕನಿಷ್ಠವಾಗಿ ಹೇಳುವುದರಲ್ಲಿ ಎಂದರು. ಕಥೆಗಳುದ್ದಕ್ಕೂ ಸಹಬಾಳ್ವೆ, ಸಾಮರಸ್ಯದ ಅಂಶಗಳಿವೆ . ಲೇಖಕರು ಸಾಮಾಜಿಕ ಹೊಣೆಗಾರಿಕೆಯನ್ನು ಇಲ್ಲಿ ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡಿ, ಇಂತಹ ಕಾರ್ಯಕ್ರಮಗಳು ಲೇಖಕರನ್ನು ಪ್ರೋತ್ಸಾಹಿಸುವುದರ ಜತೆಗೆ ಲೇಖಕರ ಕೃತಿಗಳ ಒಳನೋಟ, ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ “ಹೊಸ ಓದು” ಸರಣಿಯದ್ಧಾಗಿದೆ ಎಂದರು.