ಜಿಲ್ಲೆ

ಅರ್ಹರೆಲ್ಲರಿಗೂ ತ್ರಿಚಕ್ರ ವಾಹನ ವಿತರಣೆ

ಕಲಬುರಗಿ: ನಮ್ಮ ಸರ್ಕಾರದ ಅವಧಿಯಲ್ಲಿ ದಕ್ಷಿಣ ಕ್ಷೇತ್ರದ ಅರ್ಹ ಅಂಗವಿಕಲರಿಗೆ ಸುಗಮ ಓಡಾಟಕ್ಕೆ ತ್ರಿಚಕ್ರ ವಾಹನ ವಿತರಣೆ ಮಾಡಲಾಗುವುದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೨೦೨೦-೨೧ನೇ ಸಾಲಿನ ಡಿಎಂಎಫ್ ನಿಧಿಯಡಿ ೩೫ ಜನ ಅಂಗವಿಕಲರಿಗೆ ತಲಾ ೯೭ ಸಾವಿರ ರೂ. ಮೊತ್ತದ ತ್ರಿಚಕ್ರ ವಾಹನ ವಿತರಣೆ ಮಾಡಿ ಮಾತನಾಡಿ, ನಾನು ವಿಧಾನ ಪರಿಷತ್ ಸದಸ್ಯ, ಜಿಪಂ ಅಧ್ಯಕ್ಷನಾಗಿದ್ದಾಗಲೂ ವಿಶೇಷ ಕಾಳಜಿ ವಹಿಸಿ ತ್ರಿಚಕ್ರ ವಾಹನ ವಿತರಣೆ ಮಾಡಲಾಗಿತ್ತು. ಮುಂದಿನ ಹಂತದಲ್ಲಿ ಉಳಿದವರಿಗೆ ವಾಹನ ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಪಂಚ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಪ್ರಮುಖರಾದ ಇನಾಂದಾರ, ರಾಜು ಜಾನೆ, ಶೇಖ್ ಹುಸೇನಿ, ನಿಂಗಮ್ಮ ಕಟ್ಟಿಮನಿ, ರೇಣುಕಾ ಹೋಳ್ಕರ್, ಲತಾ ರಾಠೋಡ್, ನೀಲಕಂಠ ಮೂಲಗೆ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ದೇವರಾಜ ಕುಲಕರ್ಣಿ, ಪ್ರಕಾಶ ಜಾಧವ್, ಅಫಜಲ್, ಮೇಘಾಂಜಲಿ, ಪ್ರಕಾಶ ದ್ಯಾಬೇರಿ, ಪ್ರಕಾಶ ಜಗತಿ ಇತರರಿದ್ದರು.