ಶ್ರೀನಿವಾಸಪುರ: ಕೃಷಿ ಉತ್ಪನ್ನ ವಾರುಕಟ್ಟೆ ಸಮಿತಿ ಮುಂಭಾಗ ಬಡವರಿಗಾಗಿ ನಿರ್ಮಿಸುತ್ತಿರುವ ಇಂದಿರಾ ನಗರ ನನ್ನ ಕನಸಿನ ಕೂಸು. ಇಲ್ಲಿನ ನಿವೇಶನಗಳು ಬಡವರಿಗೆ ಸೀಮಿತವಾಗಿದ್ದು, ಜಾತಿ, ಪಕ್ಷಭೇದವಿಲ್ಲದೆ ಫಲಾನುಭವಿಗಳನ್ನು ಆಯ್ಕೆ ವಾಡಲಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುವಾರ್ ಹೇಳಿದರು.
ಪಟ್ಟಣದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ವಾಣವಾಗುತ್ತಿರುವ ಮನೆಗಳ ಕಾಮಗಾರಿ ಪ್ರಗತಿಯನ್ನು ಗುರುವಾರ ವೀಕ್ಷಿಸಿ ವಾತನಾಡಿ, ಬಡವರಿಗೆ ಸೂರು ನೀಡಲು ಬೋವಿನಾಚನಪಲ್ಲಿ ಕೆರೆಯಂಗಳವನ್ನು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿವೇಶನ ವಾಡಿಸಿ ಸ್ಲಂ ಬೋರ್ಡ್‌ನಿಂದ ಕೆಲ ಮನೆ ನಿರ್ಮಿಸಲಾಯಿತು ಎಂದರು.
ಇಲ್ಲಿ ಬಡವರಲ್ಲದೆ ಕೆಲ ಶ್ರೀಮಂತರೂ ನಿವೇಶನ ಹಕ್ಕುಪತ್ರ ಪಡೆದಿರುವುದರಿಂದ 2004ರಲ್ಲಿ ಶಾಸಕನಾಗಿದ್ದಾಗ ಮೀಸಲಾತಿಯಂತೆ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳಿಂದ ಸಕ್ರಮಗೊಳಿಸಿ 470 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. 94 ಸಿಸಿಯಿಂದ ಖಾತೆ ವಾಡುವ ಸಂದರ್ಭದಲ್ಲಿ 70 ಹಕ್ಕುಪತ್ರಗಳಿಗೆ ಖಾತೆ ನಂಬರ್ ಬದಲಾವಣೆಯಾಗಿದೆ. ತಹಸೀಲ್ದಾರ್ ಹಾಗೂ ಮುಖ್ಯಾಧಿಕಾರಿ ಸಮ್ಮುಖದಲ್ಲಿ ಸರಿಪಡಿಸಿಕೊಡಲಾಗುವುದು ಎಂದರು.
470 ಫಲಾನುಭವಿಗಳ ಹೆಸರು ಶಿಫಾರಸು ವಾಡಿ ಕಳುಹಿಸಿದರೆ ಸರ್ಕಾರದಿಂದ ವಿವಿಧ ಯೋಜನೆಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಮಧ್ಯವರ್ತಿಗಳ ಮೂಲಕ ಉಳ್ಳವರು ನಿವೇಶನ ಪಡೆಯಲು ಬಂದರೆ ಅಂತಹವರಿಗೆ ಅವಕಾಶ ಇಲ್ಲ. ಯಾರ ಶಿಫಾರಸಿಗೂ ಮಣಿಯದೆ ಅರ್ಹರಿಗೆ ಸವಲತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೆಪ್ಟೆಂಬರ್‌ನೊಳಗೆ ಪೂರ್ಣಗೊಳ್ಳಲಿ: ಇಂದಿರಾ ನಗರ, ಕಟ್ಟೆಕೆಳಗಿನ ಪಾಳ್ಯ, ಸಂತೆ ಮೈದಾನ, ಅಂಬೇಡ್ಕರ್ ಪಾಳ್ಯ ಹಾಗೂ ಜಗಜೀವನಪಾಳ್ಯದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ವಾಣ ವಾಡುತ್ತಿರುವ 600 ಮನೆಗಳ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ವಾಹಿತಿ ಪಡೆದ ರಮೇಶ್ ಕುಮಾರ್, ಫಲಾನುಭವಿ ಕಟ್ಟಬೇಕಾಗಿರುವ 45 ಸಾವಿರ ರೂಗಳನ್ನು ಕಾರ್ಮಿಕ ಇಲಾಖೆಯಿಂದ ಒದಗಿಸಲಾಗುವುದು. ಸೆಪ್ಟೆಂಬರ್‌ನೊಳಗೆ ಮನೆ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.
ಶಾಲೆ ಆರಂಭಿಸಿ: ಇಂದಿರಾ ನಗರದಲ್ಲಿ ಬಡವರೇ ಹೆಚ್ಚಿರುವುದರಿಮದ 1ರಿಂದ 7ನೇ ತರಗತಿಯವರೆಗೆ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಲು ಬಿಇಒ ಉವಾದೇವಿಗೆ ರಮೆಶ್ ಕುಮಾರ್ ಸೂಚನೆ ನೀಡಿದರಲ್ಲದೆ, ಈಗಿರುವ ಅಂಗನವಾಡಿ ಕೇಂದ್ರದೊಂದಿಗೆ ಹೆಚ್ಚುವರಿ ಮತ್ತೊಂದು ಕೇಂದ್ರ ಸ್ಥಾಪನೆ ವಾಡಲು ಸೂಚಿಸಿದರು. ಇಂದಿರಾ ನಗರದಿಂದ ಈಚಲಕುಂಟೆ ಕೆರೆಯ ರಾಜಕಾಲುವೆಗೆ ನೀರು ಹೋಗುತ್ತಿದ್ದ ರಾಜಕಾಲುವೆ ಒತ್ತುವರಿಯಾಗಿದೆ ಎಂದು ಸ್ಥಳೀಯರು ತಿಳಿಸಿದಾಗ, ಯಾರ ಮುಲಾಜಿಗೂ ಒಳಪಡದೆ ರಾಜಕಾಲುವೆ ತೆರವುಗೊಳಿಸಿ ಎಂದು ತಹಸೀಲ್ದಾರ್ ಶ್ರೀನಿವಾಸ್‌ಗೆ ಸೂಚಿಸಿದರು.
ಅಲ್ಪ ಸಂಖ್ಯಾತರ ವಾರ್ಡ್‌ಗಳಲ್ಲಿ ವಸತಿರಹಿತರ ಪಟ್ಟಿ ನೀಡಿದರೆ ಅವರಿಗೂ ನಿವೇಶನ ಮತ್ತು ಸೂರು ಒದಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು. ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷ ಐಯಿಸಾ ನಯಾಜ್, ಸದಸ್ಯರಾದ ಹನೀಸ್ ಅಹಮದ್, ಮುನಿರಾಜು, ನಾಗರಾಜ್, ವಾಜಿ ಸದಸ್ಯ ಶಂಕರ್, ಸ್ಲಂಬೋರ್ಡ್ ಎಇಇ ಚರಣ್‌ರಾಜ್, ಮುಖಂಡ ಜಾಮಶೆಟ್ಲು ಶ್ರೀನಿವಾಸರೆಡ್ಡಿ ಇದ್ದರು.