ಜಿಲ್ಲೆ

ಅರ್ಹತಾ ಪರೀಕ್ಷಾ ಕೇಂದ್ರಕ್ಕೆ ಡಿಸಿ ಭೇಟಿ

ಚನ್ನಬಸಯ್ಯ ಗುರುವಿನ

ಯಾದಗಿರಿ: ಜಿ¯್ಲೆಯಲ್ಲಿರುವ ನಾಲ್ಕು ಪ್ರತಿಷ್ಠಿತ ಶಾಲೆಗಳಲ್ಲಿ ಎಸ್‌ಸಿ, ಎಸ್‌ಟಿ ಮಕ್ಕಳಿಗೆ ೬ನೇ ತರಗತಿಯಿಂದ ಉಚಿತ ಶಿP್ಷÀಣ ಕೊಡಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಶನಿವಾರ ಹಮ್ಮಿಕೊಂಡ ಅರ್ಹತಾ ಪರೀಕ್ಷೆ ಒಟ್ಟು ೩೮೧ ಮಕ್ಕಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.

ಶನಿವಾರ ಇಲ್ಲಿನ ಕನಕ ನಗರದಲ್ಲಿನ ಲಿಂಗೇರಿ ಕೊನಪ್ಪ ಆರ್.ನಾಡಗೌಡ ಪ್ರೌಢಶಾಲೆ ನಡೆದ ಪರೀಕ್ಷೆಗೆ ೩೦೩ಎಸ್‌ಸಿ ಹಾಗೂ ೮೧ಎಸ್‌ಟಿ ಸಮುದಾಯಗಳ ಮಕ್ಕಳು ಪರೀಕ್ಷೆ ಬರೆದಿz್ದÁರೆ. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಜಿ¯್ಲÁಧಿಕಾರಿ ಡಾ.ಸುಶೀಲಾ ಅವರು, ಶಾಲೆಯ ಬೇರೆ ಬೇರೆ ಕೋಣೆಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ಮಕ್ಕಳಿಗೆ ಧೈರ್ಯ ಹೇಳಿ ತಾಳ್ಮೆಯಿಂದ ಎಲ್ಲ ಪ್ರಶ್ನೆಗಳಿಗೆ ನಿಖರವಾದ ಉತ್ತರ ಬರೆಯಿರಿ ಎಂದು ಹೇಳಿದರು.

ಈ ಪರೀಕ್ಷೆಯಲ್ಲಿ ಪಾಸಾದವರಿಗೆ ಮೆರಿಟ್ ಆಧಾರದ ಮೇಲೆ ನಗರದ ಡಿಡಿಯು, ಶಹಾಪುರದ ಡಿಡಿಯು, ವಿದ್ಯಾರಣ್ಯ ಶಾಲೆ ಹಾಗೂ ದಿಗ್ಗಿಯಲ್ಲಿರುವ ಶಾಲೆಯೊಂದರಲ್ಲಿ ಪ್ರವೇಶ ನೀಡಿ, ಶಾಲಾ ಶುಲ್ಕ, ವಸತಿ ಮತ್ತು ಊಟದ ವ್ಯವಸ್ಥೆ ಸಮಾಜ ಕಲ್ಯಾಣ ಇಲಾಖೆಯಿಂದ ಮಾಡಲಾಗುವುದು. ೬ರಿಂದ ೧೦ನೇ ತರಗತಿಯವರೆಗೆ ಮತ್ತು ಡಿಡಿಯು ಸಂಸ್ಥೆಯಲ್ಲಿ ಕಾಲೇಜು ವ್ಯಾಸಂಗವೂ ಮಾಡಬಹು ಎಂದು ಇಲಾಖೆ ಸಹಾಯಕ ನಿರ್ದೆಶಕ ಎಸ್.ಎಸ್.ಚನ್ನಬಸಪ್ಪ ತಿಳಿಸಿz್ದÁರೆ. ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳಾದ ಸಿದ್ದಣ ಅಣಬಿ, ಬೇಬಿ ಹುಲಸ್ವಾರ್, ಡಿ.ಎಂ.ಹೊಸಮನಿ, ಪರೀಕ್ಷಾ ಮುಖ್ಯಸ್ಥೆ ಅನ್ನಪೂರ್ಣಾ, ಅಧಿP್ಷÀಕರಾದ ಶೇಖರಪ್ಪ, ಚನ್ನಪ್ಪ, ವಿದ್ಯಾ ಸಜ್ಜನ್ ಇತರರಿದ್ದರು.