filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 43; 
ಜಿಲ್ಲೆ

ಅರ್ಹ ಫಲಾನುಭವಿಗಳನ್ನು ಗುರುತಿಸಿ ಸವಲತ್ತು ನೀಡಿ

ಹನೂರು: ಸರ್ಕಾರದಿಂದ ಮಂಜೂರಾಗಿರುವ ಶೌಚಗೃಹಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ನೀಡಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಪಿ ಮಹೇಶ್‌ಕುಮಾರ್ ತಿಳಿಸಿದರು.

ಶೌಚಗೃಹ ಫಲಾನುಭವಿಗಳ ಆಯ್ಕೆ ಸಂಬಂಧ ಸೋಮವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಹನೂರು ಪಪಂಗೆ ಸರ್ಕಾರದಿಂದ 33 ಶೌಚಗೃಹಗಳು ಮಂಜೂರಾಗಿವೆ. ಕಳೆದ 6 ತಿಂಗಳಿನಿಂದಲೂ ಅರ್ಹ ಫಲಾನುಭವಿಗಳು ಆಯ್ಕೆಯಾಗಿಲ್ಲ. ಇದರಿಂದ ಶೌಚಗೃಹಗಳು ಸರ್ಕಾರಕ್ಕೆ ವಾಪಾಸ್ಸಾಗುವ ಸಾಧ್ಯತೆ ಹೆಚ್ಚಿದೆ. ಪಪಂ ವ್ಯಾಪ್ತಿಯಲ್ಲಿ ಕೆಲವರು ಇನ್ನೂ ಶೌಚಗೃಹ ನಿರ್ಮಿಸಿಕೊಂಡಿಲ್ಲ. ಇದು ಅನೈರ್ಮಕ್ಕೆ ಕಾರಣವಾಗಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮುತುರ್ವಜಿ ವಹಿಸಿ ಫಲಾನುಭವಿಗಳ ಆಯ್ಕೆ ಮಾಡುವುದರ ಮೂಲಕ ಸರ್ಕಾರದ ಸವಲತ್ತನ್ನು ದೊರಕಿಸಿ ಕೊಡಬೇಕು ಎಂದು ಸೂಚಿಸಿದರು.

ಶೌಚಗೃಹ ನಿರ್ಮಾಣಕ್ಕೆ ಸರ್ಕಾರದಿಂದ 10 ಸಾವಿರ ರೂ. ಹಾಗೂ ಪಪಂ ವತಿಯಿಂದ 20 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಶೌಚಗೃಹ ಹೊಂದಿಲ್ಲದವರು ಹಾಗೂ ನಿವೇಶವನ್ನು ಹೊಂದಿರುವವರಿಗೆ ಈ ಬಗ್ಗೆ ಮಾಹಿತಿ ತಿಳಿಸಿ ಶೌಚಗೃಹವನ್ನು ನಿರ್ಮಿಸಿಕೊಳ್ಳುವಂತೆ ತಿಳಿಸಬೇಕು. ಇನ್ನು ಈಗಾಗಲೇ ಶೌಚಗೃಹವನ್ನು ನಿರ್ಮಿಸಿಕೊಂಡಿದ್ದು, ಪ್ರೋತ್ಸಾಹ ಧನ ನೀಡದಿರುವುದರ ಬಗ್ಗೆ ಪರಿಶೀಲಿಸಲಾಗುವುದು. ಅಗತ್ಯ ಕ್ರಮವಹಿಸಿ ಮುಂದಿನ ದಿನಗಳಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗುವುದು. ಜತೆಗೆ ಆಯಾ ವಾರ್ಡ್‌ನಲ್ಲಿ ಇರುವ ಶೌಚಗೃಹ ಬೇಡಿಕೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಸದಸ್ಯರಾದ ಸುದೇಶ್, ಮಹಾದೇಶ್, ಬಸವರಾಜು ಇತರರು ಇದ್ದರು.