ಜಿಲ್ಲೆ

ಅರ್ಧ ಕೆಜಿ ಗಾಂಜಾ ವಶ, ಮತ್ತಿಬ್ಬರ ಬಂಧನ

ಹುಬ್ಬಳ್ಳಿ: ನಗರದ ತೋಳನಕೆರೆ ಹತ್ತಿರ ಬೈಕ್​ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಳೇಹುಬ್ಬಳ್ಳಿ ಗುರುನಾಥನಗರದ ನೂರ್​ಅಹ್ಮದ್ ಹೈದರಸಾಬ ಮುಲ್ಲಾ (24) ಹಾಗೂ ವಿಜಯನಗರ ಚಂದ್ರನಾಥ ನಗರದ ಅಕ್ಷಯ ರಾಜೇಂದ್ರ ಪ್ರರ್ಣೆಕರ (27) ಬಂಧಿತ ಆರೋಪಿಗಳು. ಅವರಿಂದ 500 ಗ್ರಾಂ ಮಾದಕ ಪದಾರ್ಥ ಅಂದಾಜು ಮೌಲ್ಯ 25 ಸಾವಿರ ರೂ. ಹಾಗೂ ಸಾಗಾಟಕ್ಕೆ ಬಳಸಿದ ರಾಯಲ್ ಎನ್​ಫೀಲ್ಡ್ ಥಂಡರ್ ಬರ್ಡ್ ಬೈಕ್ ಮತ್ತು ಎರಡು ಮೊಬೈಲ್ ಫೋನ್, ಆರ್​ಸಿ ಬುಕ್, ಡಿಎಲ್ ನಕಲು ಪ್ರತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹು-ಧಾ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಇನ್ಸ್​ಪೆಕ್ಟರ್ ಶ್ರೀಶೈಲ್ ಬ್ಯಾಕೋಡ ಹಾಗೂ ಎಎಸ್​ಐ ಎಸ್.ಎಂ. ಹೊಸಮನಿ, ಎ.ಎ. ಮಿರ್ಜಿ, ವಿ.ಬಿ. ಮಾಯಣ್ಣವರ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಆಯುಕ್ತ ಆರ್. ದಿಲೀಪ್ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಎನ್.ಸಿ. ಕಾಡದೇವರ ತನಿಖೆ ಕೈಗೊಂಡಿದ್ದಾರೆ.