ಹುಣಸಗಿ: ಸರ್ಕಾರದ ನಿಯಮದ ಪ್ರಕಾರ ಶಿವಶರಣ ನುಲಿಯ ಚಂದಯ್ಯ, ದಿ.ದೇವರಾಜ ಅರಸ್, ಬ್ರಹ್ಮಶ್ರೀ ನಾರಾಯಣಗುರು ಹಾಗೂ ಭಗವಾನ್ ಶ್ರೀಕೃಷ್ಣ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ ಹೇಳಿದರು.
ಈ ಕುರಿತು ಮಂಗಳವಾರ ತಹಸಿಲ್ ಕಚೇರಿಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಜಯಂತಿ ಆಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾತನಾಡಿ, ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿ ಮತ್ತು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು. ಅಲ್ಲದೆ ಈ ಮಹನೀಯರ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕೊಡಿಸಬೇಕು ಎಂದು ಹೇಳಿದರು. ಆರ್ಯ ಈಡೀಗ ಸಮಜದ ಯುವ ಮುಖಂಡ ಮಲ್ಲಿಕಾರ್ಜುನ ಗುತ್ತೇದಾರ್, ಬಸವರಾಜ ಗುತ್ತೆದಾರ್, ರೈತ ಸಂಘದ ಮುಖಂಡ ಮುದ್ದಣ್ಣ ಅಮ್ಮಾಪುರ ತಮ್ಮ ಅಭಿಪ್ರಾಯ ತಿಳಿಸಿದರು. ಕಾರ್ಮಿಕ ಕಲ್ಯಾಣಾಧಿಕಾರಿ ಎಲ್.ಎನ್ ಚೌಧರಿ, ಸಿಡಿಪಿಒ ಅನೀಲಕುಮಾರ ಕಾಂಬಳೆ, ಶ್ರೀಶೈಲ ಮಲ್ಲಿಕಾರ್ಜುನ, ಗ್ರಾಮ ಆಡಳಿತಾಧಿಕಾರಿ ಹಸನ್ ಮುಲ್ಲಾ, ಹಳ್ಳೆಪ್ಪ ಗುತ್ತೇದಾರ್, ಬಸವರಾಜ ಗುತ್ತೇದಾರ, ಭೀಮಣ್ಣ, ಕನಕಪ್ಪ ಯಾದವ ಇತರರಿದ್ದರು.
ಹಸನ್ ಮುಲ್ಲಾ ಸ್ವಾಗತಿಸಿದರು. ಯಲ್ಲಪ್ಪ ವಾಲಿ ವಂದಿಸಿದರು. ಕಂದಾಯ ಇಲಾಖೆ ಅರವಿಂದ ಖಂಡೆಕರ ನಿರೂಪಣೆ ಮಾಡಿದರು.