ಜಿಲ್ಲೆ

ಅರ್ಜಿ ಸ್ವೀಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಚಿತ್ರದುರ್ಗ: ಕಾರ್ಮಿಕ ಕಲ್ಯಾಣ ಮಂಡಳಿ ಸೌಲಭ್ಯಗಳಿಗೆ ಕೂಡಲೇ ಅರ್ಜಿ ಆಹ್ವಾನಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಮಿತಿ ಕಾರ‌್ಯಕರ್ತರು ಡಿಸಿ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
ಅರ್ಜಿ ಸ್ವೀಕಾರಕ್ಕೆ ಈಗಾಗಲೇ ವಿಳಂಬವಾಗಿದ್ದು, ಕೂಡಲೇ ಅರ್ಜಿ ಸ್ವೀಕರಿಸಬೇಕು. ಮೇ 30ಕ್ಕೆ ಮುಕ್ತಾಯಗೊಂಡಿರುವ ಕಾರ್ಮಿಕ ಮಕ್ಕಳ ಶೈಕ್ಷಣಿಕ ಅರ್ಜಿಗಳ ಸ್ವೀಕಾರವನ್ನು ಆಗಸ್ಟ್ 31ರ ವರೆಗೆ ವಿಸ್ತರಿಸಬೇಕು. 2023ರ ಅಧಿಸೂಚನೆ ರದ್ದುಪಡಿಸಿ 2021ರ ಅಧಿಸೂಚನೆ ಅನ್ವಯ ಶೈಕ್ಷಣಿಕ ಧನ ಸಹಾಯ ನೀಡಬೇಕು. ಹೊಸದಾಗಿ ಅರ್ಜಿ ಸಲ್ಲಿಕೆಗೆ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು. ಹೈಕೋರ್ಟ್ ಮಧ್ಯಂತರ ಆದೇಶದನ್ವಯ ವಿದ್ಯಾರ್ಥಿಗಳಿಬ್ಬರಿಗೆ ಶೈಕ್ಷಣಿಕ ಧನ ಸಹಾಯ ಪಾವತಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‌ಪೀರ್, ಬಿ.ಕೆ.ನಾಗರಾಜಚಾರಿ, ಮಂಜುನಾಥ, ಮಹಮದ್ ಜಿಕ್ರಿಯಾವುಲ್ಲಾ, ರಾಘವೇಂದ್ರ, ಅಬ್ದುಲ್ಲಾ, ರಶೀದ್, ಉಮೇಶ್, ಶೇಖ್ ಕಲೀಂವುಲ್ಲಾ, ಕೆ.ಎನ್.ನಾಗರಾಜ್, ಸೈಯದ್ ಮುಜ್ಜು ಮತ್ತಿತರರು ಇದ್ದರು.