ಚಾಮರಾಜನಗರ: ತಾಲೂಕಿನ ಹೊಂಡರಬಾಳುವಿನಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 2025-26ನೇ ಸಾಲಿನ 9 ಮತ್ತು 11ನೇ ತರಗತಿ ದಾಖಲಾತಿಗಾಗಿ 2025ರ ಫೆ.8ರಂದು ನಡೆಯುವ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ನವೆಂಬರ್ 9ರವರೆಗೆ ವಿಸ್ತರಿಸಲಾಗಿದೆ.
ಮೀಸಲಾತಿಯು ಕೇಂದ್ರ ಸರ್ಕಾರದ ನಿಯಮದಂತೆ ಅನ್ವಯವಾಗುತ್ತದೆ. 9ನೇ ತರಗತಿಗೆ ವೆಬ್‌ಸೈಟ್ ಮೂಲಕ ನ.9ರೊಳಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಮೊ.ಸಂ 9742476738, 9008259934, 9964932482 ಅನ್ನು ಸಂಪರ್ಕಿಸಬಹುದು ಎಂದು ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.