ಆಲ್ದೂರು: ಮಳೆಯಿಂದಾಗಿ ಹಾನಿಯಾಗಿರುವ ಕಾಳುಮೆಣಸು ಪರಿಹಾರಕ್ಕೆ ಬುಧವಾರ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ನೂಕುನುಗ್ಗಲು ಉಂಟಾಯಿತು. ಹೋಬಳಿಯ ಎಲ್ಲ ಗ್ರಾಮಗಳ ಅರ್ಜಿಯನ್ನು ನಾಡ ಕಚೇರಿಯಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದೆ. ಹಾಗಾಗಿ ಬೆಳೆಗಾರರು ಬೆಳೆಗಾರರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಮಧ್ಯಾಹ್ನ ಪೊಲೀಸ್ ಸಿಬ್ಬಂದಿ ನೆರವಿನಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಬುಧವಾರದಿಂದ ನಾಡ ಕಚೇರಿಯಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಬೆಳಗ್ಗೆ ನೂಕುನುಗ್ಗಲು ಉಂಟಾಯಿತು. ಟೋಕನ್ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನವೇ 415 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸೆ.15ರಂದು ಅರ್ಜಿ ಸ್ವೀಕರಿಸಲು ಬುಧವಾರವೇ ಟೋಕನ್ಗಳನ್ನು ವಿತರಿಸಲಾಗಿದೆ. | ಸುಮಿತ್ರಾ, ಉಪ ತಹಸೀಲ್ದಾರ್