ಜಿಲ್ಲೆ

ಅರ್ಜಿ ಆಹ್ವಾನ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಗರಸಭೆ ಎಸ್‌ಎಫ್‌ಸಿ ನಿಧಿಯಡಿ 2023-24ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಅವಕಾಶ ಕಲ್ಪಿಸಲಾಗಿದೆ. ಶೇ5 ಯೋಜನೆಯಡಿ ಯಶಸ್ವಿನಿ ಯೋಜನೆಗೆ ಒಳಪಟ್ಟ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರು ಒಂದು ಬಾರಿ ಸಹಾಯಧನ ಪಡೆಯ ಲು ಹಾಗೂ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರೋತ್ಸಾಹ ಧನ ಪಡೆಯಲು ಅರ್ಜಿಸಲ್ಲಿಸಬಹುದು. ಶೇ.7.25 ಯೋ ಜನೆಡಿ ಪಿಯುಸಿ, ಪ್ಯಾರಮೆಡಿಕಲ್, ಡಿಪ್ಲೊಮಾ, ಡಿ.ಇಡಿ, ಸಿ.ಪಿ.ಇಡಿ, ಬಿ.ಎಡ್ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳು ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಬಹುದೆಂದು ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.