ಜಿಲ್ಲೆ

ಅರೆ ಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಕ್ಕೆ ಅರ್ಜಿ

ಚಿತ್ರದುರ್ಗ:ರಾಜ್ಯಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನ ಮೇರೆಗೆ ಜಿಲ್ಲೆಯ ಆರು ತಾಲೂಕು ಕಾನೂನು ಸೇವಾಸಮಿತಿಗಳಿ ಗೆ ಅರೇ ಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವರು,ಉನ್ನತ ಶಿಕ್ಷಣದ ವಿದ್ಯಾರ್ಥಿಗಳು,ಪ್ರಾಧ್ಯಾಪಕರು, ಕಾನೂನು ವಿದ್ಯಾ ರ್ಥಿಗಳು,ಅಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಸರ್ಕಾರಿ ನೌಕರರು,ನಿವೃತ್ತ ನೌಕರರು,ವಿವಿಧ ಸಂಘಟನೆಗಳ ಸದಸ್ಯರು, ಮಂಗಳಮುಖಿಯರು, ಸನ್ನಡತೆ ಆಧಾರದಡಿ ಬಿಡುಗಡೆ ಹೊಂದಿದ ಬಂಧಿಗಳು ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಅರ್ಜಿ ಸಲ್ಲಿಸ ಬಹುದು.
ನಿಗದಿತ ಅರ್ಜಿ ನಮೂನೆಯಲ್ಲಿ ವೈಯಕ್ತಿಕ ವಿವರಗಳನ್ನು ಸ್ವ ಹಸ್ತಾಕ್ಷರದಲ್ಲಿ ಭರ್ತಿ ಮಾಡಿ,ಆಯಾ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳಿಗೆ,ಆಗಸ್ಟ್ 2ರೊಳಗೆ ಖುದ್ದು ಸಲ್ಲಿಸಬೇಕು. ಕಳೆದ ವರ್ಷದಲ್ಲಿ ನೇಮಕವಾಗಿದ್ದವರು ಮತ್ತೆ ಕರ್ತವ್ಯ ನಿರ್ವಹಿಸಲು ಆ ಸಕ್ತ ಇದ್ದರೆ ಒಪ್ಪಿಗೆ ಪತ್ರವನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಸ್ವಯಂ ಸೇವಕರಿಗೆ ಪ್ರತಿ ಕೆಲಸದ ದಿನಕ್ಕೆ 250ರೂ.ಮೀರದಂತೆ ಗೌ ರವಧನ ನಿಗಧಿಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ತಿಳಿಸಿದ್ದಾರೆ.