ಜಿಲ್ಲೆ

ಅರುಣೋದಯ ಶಾಲೆಯಲ್ಲಿ ತಾರಾಲಯ ಪ್ರಾತ್ಯಕ್ಷಿಕೆ

ಬೀದರ್: ಮಹಾರಾಷ್ಟ್ರದ ಪೊಲಾಡ್ ಸ್ಟೀಲ್ ಕಂಪನಿ ವತಿಯಿಂದ ಇಲ್ಲಿಯ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಾರಾಲಯ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಚಂದ್ರ, ಗ್ರಹಗಳು ಹಾಗೂ ನಕ್ಷತ್ರಗಳನ್ನು ವೀಕ್ಷಿಸಿ ಖುಷಿಪಟ್ಟರು.
ಕಂಪನಿಯ ಗಣೇಶ, ಅಂಕೇತ್, ಶಾಲೆ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ, ಪ್ರೌಢಶಾಲೆ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ ಇದ್ದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.