ಜಿಲ್ಲೆ

ಅರುಣೋದಯ ಶಾಲೆಗೆ ಸಮಗ್ರ ಪ್ರಶಸ್ತಿ

ಹಿರೀಸಾವೆ: ಚನ್ನರಾಯಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಹಿರೀಸಾವೆ ಹೋಬಳಿ ದಿಡಗ ಗ್ರಾಮದ ಅರುಣೋದಯ ಶಾಲೆ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.


ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟ-ಹರ್ಷಿತಾ (ಪ್ರ), 200 ಮೀ. ಓಟ-ಕೆ.ವಿ.ಕಮಲ(ಪ್ರ), 400 ಮೀ. ಓಟ-ವರ್ಷಿತಾ (ದ್ವಿ), ಡಿಸ್ಕಸ್ ಎಸೆತ -ಯೋಗೇಶ್ವರಿ(ತೃ), ಉದ್ದ ಜಿಗಿತ-ಲೀಲಾವತಿ(ಪ್ರ) ಹಾಗೂ ಕೆ.ವಿ.ಕಮಲ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಗುಂಪು ಆಟಗಳಲ್ಲಿ ಖೋ-ಖೋ ತಂಡ ಮತ್ತು ಥ್ರೋ ಬಾಲ್ ತಂಡ ಪ್ರಥಮ ಸ್ಥಾನ ಗಳಿಸಿವೆ.


ಬಾಲಕರ ವಿಭಾಗದಲ್ಲಿ 800 ಮೀ. ಓಟ-ತೇಜಸ್(ತೃ), ಬಾಲ್ ಬ್ಯಾಡ್ಮಿಂಟನ್ ಮತ್ತು ಥ್ರೋಬಾಲ್ ತಂಡ ಪ್ರಥಮ ಸ್ಥಾನ ಪಡೆದಿವೆ.
ವಿಜೇತ ವಿದ್ಯಾರ್ಥಿಗಳನ್ನು ಶಾಲೆ ವತಿಯಿಂದ ಸೋಮವಾರ ಅಭಿನಂದಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ರಾಮೇಗೌಡ, ಮುಖ್ಯಶಿಕ್ಷಕ ಬಿ.ಎನ್.ತಿಮ್ಮೇಗೌಡ, ದೈಹಿಕ ಶಿಕ್ಷಣ ಶಿಕ್ಷಕ ಡಿ.ವಿ.ನಾಗೇಶ್ ಇತರರು ಇದ್ದರು.