ಜಿಲ್ಲೆ

ಅರಿಹಂತ ಸೊಸೈಟಿಯಿಂದ ಸಹಕಾರಿಗೆ ಬಲ

ಬೋರಗಾಂವ: ಆಷ್ಟಾ ನಗರದಲ್ಲಿ ಅರಿಹಂತ ಸಂಸ್ಥೆಯ ನೂತನ ಶಾಖೆ ಆರಂಭಿಸಿರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿ ಒದಗಿದೆ ಎಂದು ರಾಜಾರಂಬಾಪು ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪ್ರತೀಕ ಪಾಟೀಲ ಅಭಿಪ್ರಾಯಪಟ್ಟರು.

ಸಾಂಗ್ಲಿ ಜಿಲ್ಲೆಯ ಆಷ್ಟಾ ನಗರದಲ್ಲಿ ಆರಂಭಿಸಿರುವ ಶ್ರೀ ಅರಿಹಂತ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ (ಮಲ್ಟಿಸ್ಟೇಟ್) ನ ೬೨ನೇ ಶಾಖೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ರಾವಸಾಹೇಬ ಪಾಟೀಲ ಸಹಕಾರದ ದೃಷ್ಟಿಯಲ್ಲಿ ೧೯೯೦ರಲ್ಲಿ ಸಂಸ್ಥೆ ಸ್ಥಾಪಿಸಿದರು. ಕ್ಷೇತ್ರದಲ್ಲಿ ಖ್ಯಾತಿ ಗಳಿಸಿ ೧,೩೦೦ ಕೋಟಿ ರೂ. ಠೇವಣಿಗಳ ಮೈಲಿಗಲ್ಲು ದಾಟಿ ೨,೦೦೦ ಕೋಟಿಯತ್ತ ಸಾಗುತ್ತಿರುವ ಈ ಸಂಸ್ಥೆಯ ಹೊಸ ಶಾಖೆ ಪ್ರಾರಂಭಿಸಿದೆ ಎಂದರು. ಸಂಸ್ಥೆ ಅಧ್ಯಕ್ಷ ಅಭಿನಂದನ ಪಾಟೀಲ ಠೇವಣಿ ಪಾವತಿ ವಿತರಿಸಿದರು.

ಸಂಸ್ಥೆ ಅಧ್ಯಕ್ಷ ಅಭಿನಂದನ ಪಾಟೀಲ, ಮೀನಾಕ್ಷಿ ಪಾಟೀಲ, ದಿಲೀಪರಾವ ವಗ್ಯಾನಿ, ವಿರಾಜ ಶಿಂಧೆ, ಬಬನದಾದಾ ಥೋಟೆ, ವಿಲಾಸ ಶಿಂಧೆ, ನರಸಗೊಂಡ ಪಾಟೀಲ, ದಿಗ್ವಿಜಯ ಪಾಟೀಲ, ಕೌಶಿಕ ವಗ್ಯಾನಿ, ಜೈದೀಪ ಥೋಟೆ, ಸಂದೀಪ ಆವಟಿ, ಅರ್ಜುನ ವಗ್ಯಾನಿ, ಶ್ರದ್ಧಾ ಲೋಂಡೆ, ಮಯೂರ ವಗ್ಯಾನಿ, ಮನೀಶ ವಗ್ಯಾನಿ, ಹರ್ಷಲ ವಗ್ಯಾನಿ, ಪ್ರಶಾಂತ ಮಾಲಗಾವೆ, ಸಂಸ್ಥೆ ಸಿಇಒ ಅಶೋಕ ಬಂಕಾಪುರೆ, ಸಂಗ್ರಾಮ ಜಾಧವ ಇತರರಿದ್ದರು. ಶಾಖಾಧಿಕಾರಿ ಕೀರ್ತಿಕುಮಾರ ಜಂಗಟೆ ವಂದಿಸಿದರು.