ಅರಿಹಂತ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ
ಆಸ್ಪತ್ರೆಯ ಕಾರ್ಯವನ್ನು ಶ್ಲಾಘಿಸಿದ ಡಾ.ವಿದ್ಯಾಶಂಕರ್.ಪಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಗುಣಮಟ್ಟದ ಆರೋಗ್ಯ ಸೇವೆಗಾಗಿ ಅರಿಹಂತ ಆಸ್ಪತ್ರೆ ಹೆಸರು ವಾಸಿಯಾಗಿದ್ದು, ನೂತನವಾಗಿ ಪ್ರಾರಂಭಿಸಿರುವ ಡಯಾಲಿಸಿಸ್ ಕೇಂದ್ರ ಮೂತ್ರಪಿಂಡ ರೋಗಿಗಗಳಿಗೆ ಸಹಕಾರಿಯಾಗಲಿದೆ ಎಂದು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆ ಹಿರಿಯ ಮೂತ್ರಪಿಂಡ ತಜ್ಞ ಡಾ.ವಿದ್ಯಾಶಂಕರ.ಪಿ ಅಭಿಪ್ರಾಯ ಪಟ್ಟರು.
ಇಲ್ಲಿನ ನೆಹರು ನಗರದಲ್ಲಿರುವ ಅರಿಹಂತ ಆಸ್ಪತ್ರೆಯಲ್ಲಿ ಸೋಮವಾರ ದೀಕ್ಷಿತ ಹೆಲ್ತ್ ಕೆರ್ ಪೈ. ಲಿ. ಘಟಕದ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಮೂತ್ರಪಿಂಡ ರೋಗಿಗಳಿಗಾಗಿ ಸುಧಾರಿತ ಮತ್ತು ಸುಲಭ ಚಿಕಿತ್ಸೆ ನೀಡಲು ಅರಿಹಂತ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರವನು ಪ್ರಾರಂಭಿಸಿದ್ದು,ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ದೊರೆಯುವಂತಾಗಿದೆ ಎಂದು ಅರಿಹಂತ ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸಿದರು. ಆಸ್ಪತ್ರೆಯ ಸಿಇಒ ಹಾಗೂ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಡಿ. ದೀಕ್ಷಿತ ಮಾತನಾಡಿ ನಾವು ಈ ಕೇಂದ್ರವನ್ನು ರೋಗಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಸ್ಥಾಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಡಯಾಲಿಸಿಸ್ ಗಾಗಿ ಸ್ಮಾರ್ಟ ಕಾರ್ಡ್‌ಗಳನ್ನು ಪರಿಚಯಿಸುತ್ತೇವೆ, ಇದರಿಂದ ರೋಗಿಗಳು ಸುಲಭವಾಗಿ ವಿವಿಧ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಅರಿಹಂತ ಆಸ್ಪತ್ರೆಯ ನಿರ್ದೇಶಕ ಅಭಿನಂದನ ಪಾಟೀಲ ಮಾತನಾಡಿ ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಮೂತ್ರಪಿಂ ಚಿಕಿತ್ಸಾಸೇವೆ ನೀಡಲು. ಹಾಗೂ ಅರಿಹಂತ ಆಸ್ಪತ್ರೆ ಅತ್ಯುತ್ತಮ, ಕೈಗೆಟುಕುವ ಮತ್ತು ಸುಲಭವಾದ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಮೂತ್ರಪಿಂಡ ರೋಗಿಗಳಿಗೆ ಸುಧಾರಿತ ಚಿಕಿತ್ಸೆ ಅತ್ಯಂತ ಅನುಕೂಲಕರ ಬೆಲೆಯಲ್ಲಿ ಲಭ್ಯವಾಗಲಿದೆ ಎಂದರು.
ಡಾ.ವರದರಾಜ ಗೊಕಾಕ, ಡಾ.ಪ್ರಭು ಹಳಕಟ್ಟಿಡಾ. ಸೂರಜ್, ಡಾ. ಸಂಜೀವ, ಡಾ. ಅಂಬರೀಶ ನೆರ್ಲಿಕರ್, ಡಾ. ಮಾಧುರಿ ದೀಕ್ಷಿತ, ಡಾ. ಅಮೃತಾ ಜೋಷಿ, ಡಾ. ಅಭಿಜೀತ ಹಿರೇಮಠ, ಡಾ. ಯುವರಾಜ ಯದ್ರಾವಿ ಇತರರಿದ್ದರು.