ಜಿಲ್ಲೆ

ಅರಿವಿನ ಮಾರ್ಗದಲ್ಲಿ ಮುನ್ನಡೆಯಿರಿ


ಯಾದಗಿರಿ: ಭಾರತೀಯ ಸಾಂಸ್ಕ್ರತಿಕ ಪರಂಪರೆಯಲ್ಲಿ ಗುರುವಿಗೆ ಗೌರವ ಸೂಚಿಸುವುದನ್ನು ಗುರುಪೂಣರ್ಿಮೆ ಎಂದು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ವಿಶ್ವಾರಾಧ್ಯ ಸಂಸ್ಥಾನದ ಮಠದ ಮಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

ಸೋಮವಾರ ಗುರುಪೂಣರ್ಿಮೆ ನಿಮಿತ್ತ ತಾಲೂಕಿನ ಅಬ್ಬೆತುಮಕೂರಿನ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಧಾಮರ್ಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಪರಶಿವನು ಸಪ್ತಋಷಿಗಳಿಗೆ ಯೋಗದ ಮಹತ್ವವನ್ನು ಸೂಚಿಸಿದ ದಿನ ಇದಾದ ಕಾರಣ ಗುರುಪೂಣರ್ಿಮೆ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಶಿಷ್ಯರಾದವರು ತಮ್ಮ ಗುರುಗಳನ್ನು ಈ ದಿನದಂದು ಗೌರವಿಸುವದೇ ಆಚರಣೆಯ ಮಹತ್ವವಾಗಿದೆ ಎಂದು ಹೇಳಿದರು.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕಿತಿ ಎಂದು ದಾಸರು ಹಾಡಿದ್ದಾರೆ. ಅಂದರೆ ಭೌತಿಕವಾಗಿ ಗುರುವಿನ ಗುಲಾಮನಾಗುವದು ಅಲ್ಲ. ಅರಿವಿನ ಗುಲಾಮನಾಗುವದು ಎಂದರ್ಥ. ಶಿಷ್ಯನಾದವನು ಗುರು ತೋರಿದ ಅರಿವಿನ ಮಾರ್ಗದಲ್ಲಿ ಮುನ್ನಡೆದಾಗ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಗುರು ಪೂಣರ್ಿಮೆ ಎರಡು ಪದಗಳ ಸಂಯೋಜನೆಯಾಗಿದೆ. ಗುರುವು ಸಂಸ್ಕೃತದ ಮೂಲ ಪದಗಳಾದ ಗು ಮತ್ತು ರು ಗಳಿಂದ ಬಂದಿದೆ. ಗು ಎಂದರೆ ಕತ್ತಲೆ ಅಥವಾ ಅಜ್ಞಾನ, ರು ಎಂದರೆ ಬಿಡಿಸುವವನು ಎಂದರೆ ಗುರು ಎಂದರೆ ಕತ್ತಲೆ ಅಥವಾ ಅಜ್ಞಾನದಿಂದ ಬಿಡಿಸುವವನು ಎಂದರ್ಥ. ಮಹಾಭಾರತ ಕಾವ್ಯ ರಚಿಸಿದ, ಬ್ರಹ್ಮಷರ್ಿ ಬಿರುದಾಂಕಿತ ವೇದವ್ಯಾಸರು ಜನಿಸಿದ್ದು ಗುರುಪೂಣರ್ಿಮೆಯಂದೇ. ಆ ಕಾರಣಕ್ಕೆ ಈ ದಿನವನ್ನು ವ್ಯಾಸ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ ಎಂದು ವಿವರಿಸಿದರು.

ಬೆಳಿಗ್ಗೆ ವಿಶ್ವಾರಾಧ್ಯರ ದೇಗುಲಕ್ಕೆ ತಳಿರು ತೋರಣಗಳಿಂದ ಹೂಮಾಲೆಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಮೂತರ್ಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಭಕ್ತಾದಿಗಳು ಡಾ.ಗಂಗಾಧರ ಮಹಾಸ್ವಾಮಿಗಳ ಪಾದ ಪೂಜೆ ಮಾಡಿದರು. ತರುವಾಯ ಆಗಮಿಸಿದ ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ ಜರುಗಿತು.