ಬಾಗಲಕೋಟೆ ನಗರದ ಕಲಾಭವನದಲ್ಲಿ ಸತ್ಯ ಶೋಧಕ ಸಂಘ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದೀಕ್ಷಾ ಕಾರ್ಯಕ್ರಮ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.  
ಜಿಲ್ಲೆ

ಅರಿತುಕೊಳ್ಳುವ ತನಕ ಅಪಾಯ ತಪ್ಪಿದಲ್ಲ

ಬಾಗಲಕೋಟೆ: ಡಾ.ಬಾಬಾ ಸಾಹೇಬರು ರಚಿಸಿದ ಸಂವಿಧಾನ ಸರ್ವರಿಗೂ ಸಮಾನತೆ ನೀಡಿದೆ. ಸಮಾಜದಲ್ಲಿ ಮೌಢ್ಯತೆ, ಕಂದಾಚಾರಕ್ಕೆ ತಡೆ ಒಡ್ಡಿದೆ. ಇಂದು ಕಾಲೇಜುಗಳಲ್ಲಿ ದೇಶ ಪ್ರೇಮ ಹೆಸರಿನಲ್ಲಿ ಯುವ ಸಮುದಾಯವನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನವನಗರದ ಕಲಾಭವನದಲ್ಲಿ ಭಾನುವಾರ ಸತ್ಯ ಶೋಧಕ ಸಂಘ ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ದೀಕ್ಷಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಕೇವಲ ಒಂದೇ ಸಿಮೀತವಾಗಿಲ್ಲ. ಶೋಷಿತರಿಗೆ ನ್ಯಾಯ ನೀಡುವಲ್ಲಿ ಯಶಸ್ವಿಯಾಗುತ್ತಿದೆ. ಸಂವಿಧಾನವನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ಅದರ ಪ್ರಾಮುಖ್ಯತೆ ಅರಿತುಕೊಳ್ಳುವ ತನಕ ಅಪಾಯ ತಪ್ಪಿದಲ್ಲ ಎಂದು ಎಚ್ಚರಿಕೆ ನೀಡಿದರು.

ಸಮಾಜದಲ್ಲಿರುವ ಮೌಢ್ಯ, ಕಂದಾಚಾರ, ತಾರತಮ್ಯ ಹೋಗಲಾಡಿಸಲು ಮಾನವ ಬಂಧುತ್ವ ವೇದಿಕೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಈ ಹಿಂದೆ ಮಹಿಳೆಯರಿಗೆ ಅವಕಾಶಗಳು ಇರಲಿಲ್ಲ. ಸ್ಥಾನಮಾನ ನೀಡುತ್ತಿರಲಿಲ್ಲ. ಸಂವಿಧಾನ ಬಂದ ಮೇಲೆ ಬಹಳಷ್ಟು ಬದಲಾವಣೆಯಾಗಿದೆ. ಸಂವಿಧಾನ ರಕ್ಷಣೆಗೆ ನಾವೆಲ್ಲ ಪಣತೊಡಬೇಕು. ಭೂಮಿ ಇರುವ ವರೆಗೆ ಬುದ್ಧ, ಬಸವ, ಅಂಬೇಡ್ಕರ ವಿಚಾರಧಾರೆಗಳು ಪ್ರಚಲಿತದಲ್ಲಿ ಇರುತ್ತವೆ ಎಂದರು.

ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ, ಸತ್ಯ ಶೋಧಕ ಸಂಘ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿದರು. ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತ ಈಟಿ, ಮುಖಂಡರಾದ ಫಿರಪ್ಪ ಮ್ಯಾಗೇರಿ, ದ್ಯಾಮಣ್ಣ ಗಾಳಿ, ಜಾಫರ ಬೇಪಾರಿ, ಸದಾಶಿವ ಕೊಡಬಾಗಿ, ಅರುಣ ಗರಸಂಗಿ, ಸಿ.ಆರ್.ಸರಿಕರ, ಎಂ.ಜಿ.ಚಲವಾದಿ ಇತರರು ಇದ್ದರು.