ಜಿಲ್ಲೆ

ಅರಸು ಜನ್ಮದಿನಾಚರಣೆ ಸರಳ

ಅಶೋಕ್ ಕುಮಾರ್ ಎನ್

ಹಗರಿಬೊಮ್ಮನಹಳ್ಳಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ದಿನವನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಾಪಂ ಇಒ. ಡಿ.ಲಕ್ಷ್ಮೀಕಾಂತ ತಿಳಿಸಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ತಾಪಂ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು.

ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಯಾವುದೇ ಸಭೆ ಸಮಾರಂಭವಾದರೂ ಅಧಿಕಾರಿಗಳು ಸಮಯ ಪಾಲನೆಮಾಡಬೇಕು. ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕೋರಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೊಟ್ರೇಶ್ ನಾಯ್ಕ ಮಾತನಾಡಿ, ಪ್ರತಿ ವರ್ಷ ನಮ್ಮ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಪ್ರತ್ಯೇಕ ಅನುದಾನ ಇಲ್ಲ. ಪುರಸಭೆಯಿಂದ 20 ಸಾವಿರ ರೂ. ನೀಡಬೇಕು, ಆದರೆ ಹಿಂದಿನ ವರ್ಷ ಕೊಡಲಿಲ್ಲ ಎಂದರು. ಆಗ ತಾಪಂ ಇಒ, ಪುರಸಭೆ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಅನುದಾನ ಕೊಡುವಂತೆ ತಿಳಿಸಿದರು. ಬಳಿಕ ಈ ವರ್ಷ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಉಪ ತಹಸೀಲ್ದಾರ್ ಶಿವಕುಮಾರ್ ಗೌಡ, ಸುಡಗಾಡ ಸಿದ್ದರ ಸಮಾಜದ ಮಲ್ಲೇಶಪ್ಪ, ಜನ ಜಾಗೃತಿ ಸಂಘಟನೆಯ ಮಂಜುನಾಥ, ಕ.ಸಾ.ಪ.ತಾಲೂಕು ಅಧ್ಯಕ್ಷ ಹುಲಿಮನಿ ಗೂಳೆಪ್ಪ, ಸಿಡಿಪಿಒ ಬೋರೇಗೌಡ, ಅಕ್ಷರ ದಾಸೋಹ ಅಧಿಕಾರಿ ರಾಜಕುಮಾರ ನಾಯ್ಕ, ಪಶುಸಂಗೋಪನೆ ಇಲಾಖೆಯ ಡಾ.ಸೂರಪ್ಪ, ಅಬಕಾರಿ ಇಲಾಖೆಯ ಮಮತಾ, ಬಿಸಿಎಂ ಇಲಾಖೆಯ ಅಧಿಕಾರಿ ರಾಮಶೇಖರ, ಮಹಾಂತೇಶ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.