ಅರಳಗುಂಡಗಿ(ಯಡ್ರಾಮಿ): ಶ್ರೀ ಸಿದ್ಧ ಶಿವಯೋಗಿಗಳು ಮಹಾನ್ ತಪಸ್ವಿಗಳಾಗಿದ್ದು, ಸಾಕಷ್ಟು ಪವಾಡಗಳ ಮೂಲಕ ಅಪಾರ ಭಕ್ತರ ಬಾಳು ಬೆಳಗಿದ್ದಾರೆ ಎಂದು ಕಡಕೋಳದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು ನುಡಿದರು.
ಗ್ರಾಮದ ಕಾಲಜ್ಞಾನಿ ಗುರು ಮಡಿವಾಳೇಶ್ವರ ವೈದ್ಯ ಬೃಹನ್ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧ ಶಿವಯೋಗಿಗಳ ದ್ವಿತೀಯ ಪುಣ್ಯಸ್ಮರಣೆ ಹಾಗೂ ವೈದ್ಯರತ್ನ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮ ಸೇರಿ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಗಿಡಮೂಲಿಕೆ ಔಷಧ ನೀಡಿ ಪ್ರಮುಖ ರೋಗಗಳನ್ನು ಗುಣಪಡಿಸಿದ್ದರು. ಅಂತೆಯೇ ಅವರನ್ನು ವೈದ್ಯ ಗುರು ಎಂತಲೇ ಕರೆಯುತ್ತಿದ್ದರು. ಅಲ್ಲದೆ ಆಂಧ್ರಪ್ರದೇಶದ ಶ್ರೀಶೈಲಂ ಸೇರಿ ಹಲವು ಕ್ಷೇತ್ರಗಳಲ್ಲಿ ಮೌನ ತಪಸ್ಸು ಮಾಡಿ, ದೇವರ ಅನುಗ್ರಹ ಪಡೆದಿದ್ದರು. ಇಂತಹ ಮಹಾನ್ ಸಿದ್ಧಿ ಪುರುಷರ ನೆಲದಲ್ಲಿ ನಾವೆಲ್ಲರೂ ಇರುವುದೇ ಪುಣ್ಯವಾಗಿದೆ ಎಂದರು.
ಚಿಗರಳ್ಳಿಯ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು ಆಶೀರ್ವಚನ ನೀಡಿದರು. ಮದ್ದಡಗಾದ ಶ್ರೀ ಸದ್ಯೋಜಾತ ರೇಣುಕಾ ಶಿವಾಚಾರ್ಯರು, ಮುz್ದೆÃಬಿಹಾಳದ ಶ್ರೀ ಡಾ.ಲಾಲ್ ಲಿಂಗೇಶ್ವರ ಶರಣರು ನೇತೃತ್ವ ವಹಿಸಿದ್ದರು. ಶ್ರೀಮಠ ಉತ್ತರಾಧಿಕಾರಿ ಶ್ರೀ ರಘನಂದ ಶಾಸ್ತಿç ಅಧ್ಯP್ಷÀತೆ ವಹಿಸಿದ್ದರು. ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಬಳಗದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸಿದ್ದಲಿಂಗ ಶಾಸ್ತಿçಗಳು ನಿರೂಪಣೆ ಮಾಡಿ, ವಂದಿಸಿದರು.
ಪ್ರಶಸ್ತಿ ಪುರಸ್ಕೃತ ಸಾಧಕರು: ಕಾಲಜ್ಞಾನಿ ಗುರು ಮಡಿವಾಳೇಶ್ವರ ವೈದ್ಯ ಬೃಹನ್ಮಠದಿಂದ ವಿವಿಧ ಕ್ಷೇತ್ರದ ಸಾಧಕರಾದ ಮುದ್ದಡಗಾದ ಶ್ರೀ ಸದ್ಯೋಜಾತ ರೇಣುಕ ಶಿವಾಚಾರ್ಯರು, ಮುz್ದÉÃಬಿಹಾಳದ ಶ್ರೀ ಡಾ.ಲಾಲಲಿಂಗೇಶ್ವರ ಶರಣರು, ಕರಬಸಯ್ಯ ಸ್ಥಾವರಮಠ, ಮಡಿವಾಳಯ್ಯಸ್ವಾಮಿ ಸ್ಥಾವರಮಠ, ಸೋಪಯ್ಯಸ್ವಾಮಿ ಸ್ಥಾವರಮಠ, ಸಿದ್ದರಾಮಪ್ಪ ದಾದಾಗೌಡ್ರ, ಬಸವರಾಜಗೌಡ ಮಾಲಿಪಾಟೀಲ್, ಗುರುಸಿದ್ದಪ್ಪಗೌಡ ದಾದಾಗೋಳ, ನಾಗನಗೌಡ ಮುದಬಸಪ್ಪಗೋಳ, ಶರಣಗೌಡ ಹಿರೇಗೌಡ್ರ, ಶಿವನಗೌಡ ಪೊಲೀಸ್ ಪಾಟೀಲ್, ಶ್ರೀಶೈಲ ಸಾಹು, ಶಿವಣ್ಣ ಬನ್ನೇಟ್ಟಿ, ಪ್ರೇಮನಗೌಡ, ರೇವಣಸಿದ್ದಪ್ಪಗೌಡ ಕಮಾನಮನಿ, ಶೇಖರಗೌಡ ಮಾಲಿಪಾಟೀಲ್, ಸಿದ್ದಣ್ಣ ಸಾಹು, ಮೈಬೂಬ್‌ಸಾಬ್, ಅಂಬಾದಾಸ ಜಮಾದಾರ್, ಈರಣ್ಣ ಬಡಿಗೇರ, ಪರಶುರಾಮ ಅವ್ವಣ್ಣನವರ್, ಅಡ್ಡೆಪ್ಪಗೌಡ ತಮ್ಮಾಗೋಳ, ಖ್ಯಾತಣ್ಣಗೌಡ ತಮ್ಮಾಗೋಳ, ಮಹಾಂತಗೌಡ ಜೋತೆಪ್ಪಗೋಳ, ಭೀಮರಾಯ ಇಸಾಂಪುರ, ಅಶೋಕ ಮದ್ಲಿಕಾರ, ಶಿವಪ್ಪ ಮದ್ಲಿಕಾರ, ಮಲ್ಲಿಕಾರ್ಜುನ ನೆಗಿನಾಳ, ನಾಗರಾಜ ಶಾಸ್ತಿç, ವಿನಾಯಕ ಹವಳಕೊಂಡ ಅವರಿಗೆ ವೈದ್ಯರತ್ನ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.