ಅರಮನೆತಲಗೂರು ಗ್ರಾಮದಲ್ಲಿ ಸುಗ್ಗಿ ಹಬ್ಬ ನಡೆಯಿತು.  
ಜಿಲ್ಲೆ

ಅರಮನೆತಲಗೂರು ಗ್ರಾಮ ಸುಗ್ಗಿ ಹಬ್ಬ ಸಂಭ್ರಮ

ಬಣಕಲ್: ಅರಮನೆತಲಗೂರು ಗ್ರಾಮದಲ್ಲಿ ಸುಗ್ಗಿ ಹಬ್ಬ ನಡೆಯಿತು. ಅಜ್ಜಮ್ಮ ಹಾಗೂ ನಾಗಲಮ್ಮ ದೇವರ ಜಾತ್ರಾ ಮಹೋತ್ಸವ ಒಂದು ವಾರದಿಂದ ನಡೆಯುತ್ತಿದೆ.

ಭಾನುವಾರ ರಾತ್ರಿ ಸುಗ್ಗಿ ಹಾಗೂ ಸೋಮವಾರ ಹಗಲು ಸುಗ್ಗಿ ನಡೆಯಿತು. ಸುತ್ತಮುತ್ತಲ ನೂರಾರು ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು. ಭಾನುವಾರ ರಾತ್ರಿ ನಿಸಾನಿ ಶಬ್ದಕ್ಕೆ ದೇವರ ಅಡ್ಡೆಯೊಂದಿಗೆ ಯುವಕರು ಕುಣಿದರು. ಸೋಮವಾರ ಬೆಳಗ್ಗೆ ಕೆಂಡೋತ್ಸವ ನಡೆಯಿತು.

ಜಾತ್ರಾ ಮಹೋತ್ಸವಕ್ಕೆ ಅರಮನೆ ತಲಗೂರು, ಮಾಳಿಂಗ ನಾಡು, ಹೆಮ್ಮಕ್ಕಿ, ಬಿಳಗಲಿ, ನೆರಂಕಿ, ಬಲಿಗೆ, ಸುಂಕಸಾಲೆ, ಕೆಳಗೂರು ಮೊದಲಾದ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಗ್ರಾಮದ ಹಿರಿಯರಾದ ಲೋಕಪ್ಪ ಗೌಡ. ಕೃಷ್ಣೇಗೌಡ, ಅಭಿಜಿತ್, ರಾಮಚಂದ್ರ, ರತ್ನಾಕರ್, ಅಶ್ವತ್ಥ್, ಸುದರ್ಶನ್, ಮಂಜಪ್ಪ ಶೆಟ್ಟಿ, ಶಂಕರ್ ಶೆಟ್ಟಿ, ಲಕ್ಷ್ಮಣ್ ಗೌಡ್ರು, ಶಂಕರಗೌಡ. ರವಿಚಂದ್ರ, ಸುಧಾಕರ ಇತರರಿದ್ದರು.