ಮೈಸೂರು: ಯುಗಾದಿ ಪ್ರಯುಕ್ತ ಅರಮನೆ ಮಂಡಳಿಯು ಮಾ.20 ರಿಂದ 26ರವರೆಗೆ ಅರಮನೆ ಆವರಣದಲ್ಲಿ ಯುಗಾದಿ ಸಂಗೀತೋತ್ಸವ ಹಮ್ಮಿಕೊಂಡಿದೆ. ಈ ಪ್ರಯುಕ್ತ ಅರಮನೆ ಆವರಣದಲ್ಲಿ ಸಂಜೆ 7 ರಿಂದ 8ರವರೆಗೆ ನಡೆಯುತ್ತಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.