ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಯ ಸಮ್ಮುಖದಲ್ಲಿ ವಿಶ್ವ ಆನೆ ದಿನವನ್ನು ಮಂಗಳವಾರ ಆಚರಿಸಲಾಯಿತು.
ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವತಿಯಿಂದ ಕರುಣಾಮಯಿ ವಿಶೇಷಚೇತನ ಮಕ್ಕಳ ಶಾಲೆ ಸಹಯೋಗದೊಂದಿಗೆ ವಿಶೇಷ ಮಕ್ಕಳಿಗೆ ಆನೆ ಸೇರಿದಂತೆ ವನ್ಯಜೀವಿಗಳ ಪರಿಚಯದೊಂದಿಗೆ ಆನೆ ದಿನವನ್ನು ಅಥರ್ಪೂರ್ಣವಾಗಿ ಆಚರಿಸಲಾಯಿತು.
ರಂಗನತಿಟ್ಟು ಪಕ್ಷಿಧಾಮದ ಪರಿಸರ ಶಿಕ್ಷಣಾಧಿಕಾರಿ ಗಗನ, ಆನೆ ಸೇರಿದಂತೆ ಇನ್ನಿತರ ವನ್ಯಜೀವಿಗಳ ಚಲನವಲನ ಕುರಿತು ವಿಶೇಷ ಮಕ್ಕಳಿಗೆ ತಿಳಿಸಿಕೊಟ್ಟರು.
ಮಾವುತರು, ಕಾವಾಡಿಗರು, ಕರುಣಾಮಯಿ ಶಾಲೆ ಶಿಕ್ಷಕರು ಇದ್ದರು.
ಶ್ರೀ ದುರ್ಗಾ ಫೌಂಡೇಷನ್ ಮಹಿಳೆಯರು ಗಜಪಡೆಯ ಮಾವುತರು ಹಾಗೂ ಕಾವಾಡಿಗರಿಗೆ ರಾಕಿ ಕಟ್ಟಿ ಸಿಹಿ ಹಂಚಿ ರಕ್ಷಾ ಬಂಧನ ಆಚರಿಸಿದರು. ಫೌಂಡೇಷನ್ ಅಧ್ಯಕ್ಷೆ ರೇಖಾ, ಸದಸ್ಯರಾದ ಖುಷಿ, ವಿನು, ಕಾವ್ಯಾ ಇತರರಿದ್ದರು.