ಜಿಲ್ಲೆ

ಅರಣ್ಯೀಕರಣಕ್ಕೆ ರಾಮನಗರದಲ್ಲಿ ಬಿತ್ತೋತ್ಸವ : ಒಂದು ವಾರ ಆಯೋಜನೆ, ಹವಾಮಾನ ವೈಪರೀತ್ಯ ತಡೆಯುವ ಉದ್ದೇಶ

ಗಂಗಾಧರ್​ ಭೈರಾಪಟ್ಟಣ, ರಾಮನಗರ

ಕಾಡು ನಾಶ ತಪ್ಪಿಸಲು ಹಾಗೂ ನೈಸಗಿರ್ಕ ಅರಣ್ಯ ನಿರ್ಮಾಣಕ್ಕಾಗಿ ರಾಜ್ಯಾದ್ಯಂತ ಆರಂಭವಾಗಿರುವ ಒಂದು ವಾರದ ಬಿತ್ತೋತ್ಸವಕ್ಕೆ ಜಿಲ್ಲೆಯಲ್ಲೂ ಚಾಲನೆ ನೀಡಲಾಗಿದೆ.

ಕಾಡು ನಾಶದಿಂದಾಗಿ ಎಲ್ಲೆಡೆ ತಾಪಮಾನ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಹವಾಮಾನ ವೈಪರೀತ್ಯಗಳು ಹೆಚ್ಚಾಗುತ್ತಿದೆ. ಇವುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ರಾಜ್ಯಾದ್ಯಂತ ಬಿತ್ತೋತ್ಸವ ಕಾರ್ಯಕ್ರಮ ಆಚರಿಸುತ್ತಿದೆ. ಈ ಸಂಬಂಧ ಜಿಲ್ಲೆಯಾದ್ಯಂತ ಭಾನುವಾರದಿಂದಲೇ ಅರಣ್ಯ ಇಲಾಖೆ ಬಿತ್ತೋತ್ಸವ ಆರಂಭಿಸಿದೆ. ಜಿಲ್ಲೆಯ ಬಯಲು ಅರಣ್ಯ ಪ್ರದೇಶದಲ್ಲಿ 50ರಿಂದ 60 ಕೆಜಿ ಬೀಜಗಳನ್ನು ಬಿತ್ತನೆ ಮಾಡಲಾಗಿದೆ.

ಹೀಗೆ ಇರುತ್ತೆ ಕಾರ್ಯಕ್ರಮ: ರಾಜ್ಯವನ್ನು ಹಸರೀಕರಣ ಮಾಡುವ ಸಲುವಾಗಿ, ಬಿತ್ತಿದಂತೆ ಬೆಳೆ ಎಂಬಂತೆ, ನಮ್ಮ ಉತ್ತಮ ಭವಿಷ್ಯಕ್ಕೆ ಇಂದೇ ಬೀಜ ಬಿತ್ತೋಣ' ಎಂಬ ೂಷವಾಕ್ಯದಡಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಬಿತ್ತೋತ್ಸವ ಆಚರಿಸಲಾಗುತ್ತಿದೆ. ಅಂದರೆ, ಕರ್ನಾಟಕದಾದ್ಯಂತ ಇರುವ 50 ವಿಭಾಗಗಳು, 228 ವಲಯಗಳಲ್ಲಿ ಜೂನ್​

5ರಿಂದ 12ವರೆಗೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ವಿವಿಧ ಸಸಿಗಳ ಬೀಜಗಳನ್ನು ಬಿತ್ತನೆ ಮಾಡಲಾಗುತ್ತದೆ.

ಎಲ್ಲೆಲ್ಲಿ ಈ ಕಾರ್ಯಕ್ರಮ?: ರಾಮನಗರ ಜಿಲ್ಲೆಯ ಬಯಲು ಅರಣ್ಯ ಪ್ರದೇಶಗಳಲ್ಲಿ ಜರುಗಲಿದೆ. ವಸತಿಶಾಲೆಗಳ ವಿದ್ಯಾಥಿರ್ಗಳು, ಸಂಗಳು, ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಅಂದರೆ, ಜೂ.12ರವರೆಗೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬಿತ್ತೋತ್ಸವ ಆರಂಭವಾಗಲಿದೆ. ಬೆಳಗ್ಗೆ 10 ಗಂಟೆಗೆ ಮುಕ್ತಾಯವಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ನೀಡುವ ವಿವಿಧ ತಳಿಯ ಸಸಿಗಳ ಬೀಜವನ್ನು ಬಯಲು ಪ್ರದೇಶಗಳಲ್ಲಿ ಬಿತ್ತನೆ ಮಾಡಬೇಕಾಗುತ್ತದೆ. ಸಹಜವಾಗಿ ಜೂನ್​ನಲ್ಲಿ ಮುಂಗಾರು ಆರಂಭವಾಗುತ್ತದೆ. ಆಗ ಬೀಳುವ ಮಳೆಯಿಂದಾಗಿ ಬಿತ್ತಿದ ಬೀಜವೂ ಮೊಳಕೆಯೊಡೆದು, ಸಸಿಯಾಗುತ್ತದೆ. ಇದರಿಂದ ಅರಣ್ಯದ ವ್ಯಾಪ್ತಿ ವಿಸ್ತರಿಸುತ್ತದೆ.

ಯಾವೆಲ್ಲ ಬೀಜಗಳ ಬಳಕೆ?: ಹೆಬ್ಬೇವು, ತೇಗ, ಯಲಚಿ, ಕಮರಾ, ಜಾಲಿ, ಹೊನ್ನೆ, ಹೊಂಗೆ, ಹುಣಸೆ, ಕಾಡುಗೇರು, ತಪಾಸಿ, ತಾರೆ, ಕರಾಚಿ, ಬೇವು, ಗಂಧ, ನೇರಳೆ, ತೊರೆ ಮಟ್ಟಿ, ಮಹಾಗನಿ, ಬೀಟೆ ಹಾಗೂ ಬನ್ನಿ ಜಾತಿಯ ಒಟ್ಟು 1,270 ಕೆಜಿ ಬೀಜ ಬಿತ್ತನೆ ಮಾಡಲು ಯೋಜನೆ ತಯಾರಾಗಿದೆ. ಜಿಲ್ಲೆಯಲ್ಲಿ ಐದು ವಲಯಗಳಿದ್ದು, ಪ್ರತಿ ವಲಯದಲ್ಲಿ ಭಾನುವಾರ ಒಂದೇ ದಿನ ಒಟ್ಟು 50 ರಿಂದ 60 ಕೆಜಿ ಬೀಜವನ್ನು ಬಿತ್ತನೆ ಮಾಡಲಾಗಿದೆ.

ನೀವು ಭಾಗವಹಿಸಿ: ಅರಣ್ಯ ಪ್ರದೇಶ ವಿಸ್ತರಣೆಗೆ ಹಾಗೂ ಪರಿಸರ ಕಾಳಜಿ ನಿಮ್ಮಲಿ ಇದೆಯೇ? ಹಾಗಾದರೆ, ನೀವೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಇದಕ್ಕಾಗಿ ಸ್ಥಳಿಯ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಹೆಸರು ನೋಂದಾಯಿಸಿಕೊಳ್ಳಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ನಿಮ್ಮನ್ನು ಸಂಪಕಿರ್ಸಿ ಮಾಹಿತಿ ಕೊಡುತ್ತಾರೆ.