ಹನೂರಿನ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಶನಿವಾರ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಿಬ್ಬಂದಿ ಶಸ್ತ್ರಾಸ್ತ್ರಗಳ ತರಬೇತಿಯಲ್ಲಿ ತೊಡಗಿರುವುದು.  
ಜಿಲ್ಲೆ

ಅರಣ್ಯ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳ ಬಳಕೆ ತರಬೇತಿ

ಹನೂರು: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಬಂದೂಕುಧಾರಿತ ಅರಣ್ಯ ಸಿಬ್ಬಂದಿಗೆ ಪಟ್ಟಣದ ಅಜ್ಜೀಪುರ ರಸ್ತೆಯಲ್ಲಿರುವ ಸಸ್ಯ ಕ್ಷೇತ್ರದಲ್ಲಿ ಶಸ್ತ್ರಾಸ್ತ್ರಗಳ ಬಳಕೆ ತರಬೇತಿ ನೀಡಲಾಗುತ್ತಿದೆ.

ಇಲಾಖೆ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳ ಪರಿಕರಗಳ ಜೋಡಣೆ, ಕಾರ್ಯ ನಿರ್ವಹಣೆ, ಸ್ಥಿತಿಗತಿ, ಸ್ವಚ್ಛತೆ ಸೇರಿದಂತೆ ಬಳಕೆಯ ವಿಧಾನದ ಬಗ್ಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, 7 ದಿನ ನಡೆಯಲಿದೆ. ಕೊಳ್ಳೇಗಾಲ, ಪಿ.ಜಿ.ಪಾಳ್ಯ ಹಾಗೂ ಹನೂರು ವನ್ಯಜೀವಿ ವಲಯದ 30 ಸಿಬ್ಬಂದಿ ಭಾಗವಹಿಸಿದ್ದು, ಅಗತ್ಯ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಎಸಿಎಫ್ ಭಾಗ್ಯಲಕ್ಷ್ಮೀ ವಿಜಯವಾಣಿಗೆ ತಿಳಿಸಿದರು.

ಆರ್‌ಎಫ್‌ಒ ಸೈಯದ್ ನಧಾಪ ಹಾಗೂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.