ಜಿಲ್ಲೆ

ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

ಚಿತ್ತಾಪುರ: ಅರಣ್ಯ ಸಂಪತ್ತು ರಾಷ್ಟ್ರದ ಸಂಪತ್ತು. ಅದನ್ನು ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ. ನೆಟ್ಟ ಸಸಿಗಳನ್ನು ಸಂರಕ್ಷಣೆಗೆ ಇಲಾಖೆ ಅಧಿಕಾರಿ, ಸಿಬ್ಬಂದಿ ಕ್ರಮಕೈಗೊಳ್ಳಬೇಕೆಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿದ ಅವರು, ಸಸಿಗಳು ನೆಟ್ಟು ಬೆಳೆಸಿದಾಗ ಉತ್ತಮವಾದ ಗಾಳಿ, ಪರಿಸರ ನೀಡುತ್ತವೆ. ಇದರಿಂದಾಗಿ ಮನುಷ್ಯ ಅರೋಗ್ಯವಂತ ಜೀವನ ನಡೆಸಬಹುದು ಎಂದರು.
ಪ್ರಿಯಾಂಕ್ ಖರ್ಗೆ ಅಂದರೆ ಬಿಜೆಪಿ ನಾಯಕರಿಗೆ ಅಲರ್ಜಿ, ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ 228 ಕೋಟಿ ರೂ. ಅನುದಾನ ತಡೆ ಹಿಡಿದಿದ್ದಾರೆ. ಆದರೆ ಅವರ ಯಾವ ಪ್ರಯತ್ನಗಳು ಫಲಿಸುವುದಿಲ್ಲ. ಚಿತ್ತಾಪುರ ಮತಕ್ಷೇತ್ರದ ಅಭಿವೃದ್ಧಿ ಮುಂದುವರಿಸುತ್ತೇನೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದರು.
ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಎನ್ಈಕೆಆರ್ಟಿಸಿ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯರಾದ ಶಿವಾನಂದ ಪಾಟೀಲ್, ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿಗೌಡ ನಾಲವಾರ, ಪ್ರಮುಖರಾದ ರಮೇಶ ಮರಗೋಳ, ಅಜೀಜ್ ಸೇಟ್, ಶ್ರೀನಿವಾಸ ಸಗರ, ವೀರಣ್ಣಗೌಡ ಪರಸರೆಡ್ಡಿ, ರಾಜಶೇಖರ ತಿಮ್ಮನಾಕ್, ಈರಪ್ಪ ಬೋವಿ, ಭೀಮಣ್ಣ ಹೋತಿನಮಡಿ, ಶ್ರೀನಿವಾಸರಡ್ಡಿ ಪಾಲಪ್, ನಾಗಯ್ಯ ಗುತ್ತೇದಾರ್, ಮಹ್ಮದ ರಸೂಲ್ ಮುಸ್ತಫಾ, ವಿನೋದ ಗುತ್ತೇದಾರ್, ಗೋವಿಂದ ನಾಯಕ, ಸೈಯದ ಜಫರುಲ್ ಹಸನ್ ಇದ್ದರು.