ಜಿಲ್ಲೆ

ಅರಣ್ಯ ಸಂಪತ್ತು ಇಲ್ಲದಿದ್ದರೆ ಕುಡಿವ ನೀರಿಗೂ ತತ್ವಾರ

ಚಿತ್ರದುರ್ಗ: ನದಿಯ ಮೂಲಗಳ ರಕ್ಷಣೆಯಲ್ಲಿ ಅರಣ್ಯದ ಪಾತ್ರ ಹಿರಿದಾಗಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸ ವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಮುರುಘಾಮಠ,ನಾನಾ ಸಂಘಟನೆಗಳ ಆಶ್ರಯದಲ್ಲಿ ಆಯೋಜಸಿರುವ ಸಸಿ ನೆಡುವ ಸಪ್ತಾಹಕ್ಕೆ ನಗರದ ಐಯುಡಿಪಿ ಲೇಔಟ್‌ನಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಶ್ರೀಗಳು,ದಕ್ಷಿಣ ಭಾರತದ ರಾಜ್ಯಗಳಲ್ಲಿ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರಿ ಂದಾಗಿ ಹೆಚ್ಚಿನ ಮಳೆಯಾಗುತ್ತಿರುವುದನ್ನು ಕಾಣಬಹು ದು. ಮನೆಗೊಂದು ಸಸಿ ನೆಟ್ಟು ಪರಿಸರ ರಕ್ಷಣೆಯೊಂದಿಗೆ ಮಳೆ ಹೆಚ್ಚಾಗುವಂತೆ ಮಾಡಬೇಕು.

ಪ್ರತಿ ಮನೆ,ಗ್ರಾಮ,ನಗರಗಳಲ್ಲಿ ಗಿಡ ನೆಟ್ಟು ಪೋಷಿಸಿದರೆ ಬರದ ನಾಡು ಚಿತ್ರದುರ್ಗ ಜಿಲ್ಲೆಯನ್ನು ಮಲೆನಾಡನ್ನಾಗಿ ಮಾಡಬಹು ದು. ಅರಣ್ಯಸಂಪತ್ತು ಇಲ್ಲದಿದ್ದರೆ ಕುಡಿಯುವ ನೀರಿಗೆ ತತ್ವಾರವಾಗಬಹುದು. ಕಳೆದ ವರ್ಷ ಮುರುಘಾಮಠದ ಆಶ್ರಯದಲ್ಲಿ ನೆಟ್ಟ ಗಿಡಗಳು ಶೇ.85ರಷ್ಟು ಉಳಿದಿವೆ ಎಂದರು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ,ತಂತ್ರಜ್ಞಾನ,ವಿಜ್ಞಾನದ ಪ್ರಗತಿ ಕೈಗಾರಿಕೆಗಳ ಹೆಚ್ಚಳದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಇದರಿಂದ ಮನುಷ್ಯನ ನಿತ್ಯಜೀವನಕ್ಕೂ ತೊಂದರೆ ಆಗುತ್ತಿದೆ. ಪ್ರಾಕೃತಿಕ ಸಮ ತೋಲನ ಏರುಪೇರಾಗುತ್ತಿದೆ. ಶ್ರೀಮಠ ಈ ವರ್ಷ ಸಪ್ತಾಹದಲ್ಲಿ 5000 ಸಸಿ ನೆಡುವ ಯೋಜನೆ ರೂಪಿಸಿದೆ. ಸೀಬಾರದ 20 ಎಕರೆ ಪ್ರ ದೇಶದಲ್ಲಿ ಅಡಕೆ ಮತ್ತು ತೆಂಗು ಬೆಳೆಯಲು ಉದ್ದೇಶಿಸಲಾಗಿದೆ ಎಂದರು.

ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿದರು.ವೀರಶೈವ ಸಮಾಜದ ಕಾರ‌್ಯದರ್ಶಿ ಪಿ.ವೀರೇಂದ್ರಕುಮಾರ್,ಶಿವಸಿಂಪಿ ಸಮಾ ಜದ ಎಸ್.ವಿ.ಕೊಟ್ರೇಶ್,ಅನಿತಾಮುರುಘೇಶ್,ಪತ್ರಕರ್ತ ಎಸ್.ಉಜ್ಜಿನಪ್ಪ,ಶರಣಯ್ಯ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್,ವೀರಶೈವ ಲಿಂಗಾಯತ ಸಮಾಜ ತಾಲೂಕು ಘಟಕದ ಎಂ.ವಿ.ಚನ್ನಯ್ಯ,ಷಡಕ್ಷರಯ್ಯ,ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಪ್ರಶಾಂತ್,ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ರಾಜೇಶ್ ಇತರರು ಇದ್ದರು. ಬಸವ ರಾಜ ಕಟ್ಟಿ ಪ್ರಾರ್ಥಿಸಿದರು. ನವೀನ್‌ಮಸ್ಕಲ್ ಸ್ವಾಗತಿಸಿದರು.

ಬಾಕ್ಸ್.

ಚಂದ್ರವಳ್ಳಿಯಲ್ಲಿಂದು ಕಾರ‌್ಯಕ್ರಮ

ಮುರುಘಾಮಠ,ವಿವಿಧ ಸಮಾಜಗಳು,ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮೇ 31ರಂದು ಬೆಳಗ್ಗೆ 7ಕ್ಕೆ ಚಿತ್ರದುರ್ಗದ ಚಂದ್ರವಳ್ಳಿ ಪ್ರದೇಶ ಮತ್ತು ಎಸ್‌ಜೆಎಂ ಪದವಿ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ‌್ಯಕ್ರಮ ಏರ್ಪಡಿಸಲಾಗಿದೆ. ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಎಂಎಲ್‌ಸಿ ಕೆ. ಎಸ್.ನವೀನ್,ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಎಸ್‌ಪಿ ರಂಜಿತ್‌ಕುಮಾರ್‌ಬಂಡಾರು,ವಿದ್ಯಾವಿಕಾಸ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿ ರ್ದೇಶಕ ಪೃಥ್ವಿ ವಿಜಯಕುಮಾರ್,ಅನುಪಮ ವಿದ್ಯಾಸಂಸ್ಥೆ ಕಾರ‌್ಯದರ್ಶಿ ಶ್ರೀನಿವಾಸ್,ಮಾತಶ್ರೀ ವಿದ್ಯಾಸಂಸ್ಥೆ ಕಾರ‌್ಯದರ್ಶಿ ವಿ.ಎಲ್. ಪ್ರ ಶಾಂತ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.

---