Oplus_16908288 
ಜಿಲ್ಲೆ

ಅರಣ್ಯ ಮಾರ್ಗ ಒತ್ತುವರಿ ತೆರವುಗೊಳಿಸಿ

ಹರಪನಹಳ್ಳಿ: ಒತ್ತುವರಿಯಾಗಿರುವ ಅರಣ್ಯ ಮಾರ್ಗ ತೆರವುಗೊಳಿಸಿ ಕುರಿಗಾಹಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಅಗ್ರಹಿಸಿ ತಾಲೂಕು ವಲಯ ಅರಣ್ಯಾಧಿಕಾರಿ ರಾಜು ಗೊಂದ್ಕರ್‌ಗೆ ಹಲುವಾಗಲು, ಕಣಿವಿ ಮತ್ತು ಗರ್ಭಗುಡಿ ಗ್ರಾಮದ ಕುರಿಗಾಹಿಗಳು ಸೊಮವಾರ ಮನವಿ ಸಲ್ಲಿಸಿದರು.

ಮಳೆಗಾಲದಲ್ಲಿ ಕುರಿಗಳನ್ನು ಮೇಯಿಸಲು ಅರಣ್ಯ ಪ್ರದೇಶಕ್ಕೆ ಹೋಗಲು ಒಂದೇ ದಾರಿ ಇದ್ದು, ಅದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ, ಈ ಮೂಲಕ ಗುಡ್ಡಕ್ಕೆ ಹೋಗಲು ತೊಂದರೆ ನೀಡುತ್ತಿದ್ದಾರೆ. ಇದರಿಂದ ನಮಗೆ ತುಂಬಾ ತೊಂದರೆ ಆಗುತ್ತಿದೆ ಎಂದು ದೂರಿದರು.

ಅರಣ್ಯ ಅಧಿಕಾರಿ ರಾಜು ಗೊಂದ್ಕರ್ ಮಾತನಾಡಿ, ಒತ್ತುವರಿಗೆ ಸಂಬಂಧಪಟ್ಟಂತೆ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.