ಜಿಲ್ಲೆ

ಅರಣ್ಯ ಜಮೀನು ವಿವಾದ ಬಗೆಹರಿಸಿ

ಡಾ.ರಂಗನಾಥ್​ ಹೇಳಿಕೆ, ಮೊದೂರಿನಲ್ಲಿ ಶಾಸಕರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ

ಕುಣಿಗಲ್​: ರೈತರ ಹಾಗೂ ಅರಣ್ಯ ಇಲಾಖೆ ಮಧ್ಯೆ ಇರುವ ಭೂ ವಿವಾದವನ್ನು ಬಗೆಹರಿಸಿ, ರೈತರು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಡಾ.ಎಚ್​.ಡಿ.ರಂಗನಾಥ್​ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕಸಬಾ ಹೋಬಳಿ ಮೊದೂರು ಗ್ರಾಮದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಶಾಸಕರ ನಡೆ, ಹಳ್ಳಿಗಳ ಕಡೆ, ನಮಸ್ತೆ ಕುಣಿಗಲ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಮೊದೂರು ಗ್ರಾಮ ಸರ್ವೇ ನಂ.12ರಲ್ಲಿ 304 ಎಕರೆ ಸರ್ಕಾರಿ ಗೋಮಾಳ ಜಮೀನು ಇದ್ದು, 1971 ಹಾಗೂ 1973, ಈ ಜಮೀನಿಗೆ ಸಂಬಂಧಿಸಿದಂತೆ ರೆತರಿಗೆ ಉಳಿಮೆ ಚೀಟಿ ನೀಡಲಾಗಿದೆ. ಆದರೆ 2014ರಲ್ಲಿ ಈ ಜಮೀನನ್ನು ಅರಣ್ಯ ಇಲಾಖೆಯವರು 65 ಎಕರೆ ಡೀಮ್ಡ್​ ಅರಣ್ಯ ಎಂದು ಮಾಡುವ ಬದಲಾಗಿ 65 ಹೆಕ್ಟೇರ್​ ಮಾಡಿದ್ದಾರೆ. ಇದರಿಂದ ರೆತರು ಉಳುಮೆ ಮಾಡಲು ಮುಂದಾದರೇ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ರೆತರು ಆರೋಪಿಸಿದರು.

ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಟಾಮ್​, ಟಾಮ್​ ಹೊಡೆಸಿ ರೆತರ ಸಮ್ಮುಖದಲ್ಲಿ ಮತ್ತೆ ಸರ್ವೆ ಮಾಡಿಸಿ ರೆತರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು. ಬಸವರಾಜು, ಪಿಡಿಒ ವತ್ಸಲಾ, ಮಾಜಿ ಅಧ್ಯ ಮೊದೂರು ಗಂಗಾಧರ್​, ಮಾಜಿ ಸದಸ್ಯ ಮೊದೂರು ಸುರೇಶ್​ ಇದ್ದರು.

ಗುತ್ತಿಗೆದಾರನಿಗೆ ನೋಟಿಸ್​ ನೀಡಿ: ಗ್ರಾಪಂ ವ್ಯಾಪ್ತಿಯ ಕಲ್ಲನಾಯಕನಹಳ್ಳಿ ಹಾಗೂ ಹೆಗ್ಗಡತ್ತಿಹಳ್ಳಿಯಲ್ಲಿ ಜೆಜೆಎಂ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ರೆತರು ದೂರಿದರು. ಇದರಿಂದ ಕೆಂಡಾ ಮಂಡಲರಾದ ಶಾಸಕರು, ಗುತ್ತಿಗೆದಾರನಿಗೆ ಕೂಡಲೇ ನೋಟಿಸ್​ ನೀಡುವಂತೆ ಇಲಾಖೆಯ ಎಇಇಗೆ ಸೂಚಿಸಿದರು. ಸರ್ವೇ ನಂ.12 ರ ಜಮೀನಿಗೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ತರದೇ ಬರಿ ಗೆಯಲ್ಲಿ ಬಂದ ಕಸಬಾ ಆರ್​ಐ ಪರಮೇಶ್​ ಅವರನ್ನು ತರಾಟೆ ತೆಗೆದುಕೊಂಡ ಶಾಸಕರು, ಮಾಹಿತಿ ಇಲ್ಲದ ಮೇಲೆ ಸಭೆಗೆ ಏಕೆ ಬಂದ್ದೀರ, ರೆತರಿಗೆ ಯಾವ ಮಾಹಿತಿ ನೀಡುತ್ತೀರ ಎಂದು ಏರಿದ ಧ್ವನಿಯನ್ನು ಆರ್​ಐ ಅನ್ನು ತರಾಟೆ ತೆಗೆದುಕೊಂಡರು.

ಮಾರಾಟ ಬೇಡ: ರೆತರ ಬದುಕಿಗೆ ಆಧಾರವಾಗಿರುವ ಜಮೀನನ್ನು ಹಣದ ಆಸೆಗೆ ಮಾರಾಟ ಮಾಡಿ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಹೊರ ರಾಜ್ಯದಿಂದ ಬರುವ ವ್ಯಾಪಾರಿಗಳು ಅಲ್ಪ ಸ್ವಲ್ಪ ಹಣ ನೀಡಿ ಕೋಟ್ಯಾಂತ ರೂ ಬೆಲೆ ಬಾಳುವ ಜಮೀನು ಕಬಳಿಸುತ್ತಿದ್ದಾರೆ. ದಳ್ಳಾಳಿಗಳ ಮಾತಿಗೆ ರೈತರು ಮರಳಾಗಿ ಜಮೀನು ಮಾರಾಟ ಮಾಡಿಕೊಂಡರೇ ಮುಂದಿನ ದಿನದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು. ಸಂತೇಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಬಡವರಿಗೆ ನಿವೇಶನ ನೀಡಲು ನಾಲ್ಕು ಎಕರೆ ಜಾಗ ಗುರುತಿಸಲಾಗಿದೆ. ಶ್ರೀದಲ್ಲೇ ನಿವೇಶನ ವಿತರಣೆಗೆ ಕ್ರಮಕೆಗೊಳ್ಳಲಾಗುವುದೆಂದು ಹೇಳಿದರು.