ಜಿಲ್ಲೆ

ಅರಕಲಗೂಡು ತಾಲೂಕಿನಾದ್ಯಂತ ಸೋ‌ಮವಾರ ರಾತ್ರಿ ಧಾರಾಕಾರ ಮಳೆ ಸುರಿದು ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಹಾನಿ‌ ಉಂಟಾಗಿದೆ

ಅರಕಲಗೂಡು: ತಾಲೂಕಿನಾದ್ಯಂತ ಸೋ‌ಮವಾರ ರಾತ್ರಿ ಧಾರಾಕಾರ ಮಳೆ ಸುರಿದು ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಹಾನಿ‌ ಉಂಟಾಗಿದೆ.
ಕೇರಳಾಪುರ ಸುತ್ತ ಮುತ್ತ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆ ಜೋರಾಗಿ ಸುರಿಯಿತು. ಮಳೆಯಿಂದಾಗಿ ತೋಟ ಗದ್ದೆಗಳಿಗೆ ನೀರು ಹರಿಯಿತು ಕಾಳೇನಹಳ್ಳಿ ಗ್ರಾಮದಲ್ಲಿ ಕೇಲ ಮನೆಗಳಿಗೆ ನೀರು ನುಗ್ಗಿರುವ ನೀರನ್ನು ಹೊರಗೆ ತೊಡಿ ಹಾಕಿದರು .ದಿಡ್ಡಮ್ಮ ದೇವಸ್ಥಾನ ರಸ್ತೆಯ ಕುಮರ ಮತ್ತು ಪ್ರೇಮಮ್ಮ ಅವರು ಮನೆಗೆ ಮಳೆ ನೀರು ನಿಂತು ಮನೆ ಮಣಿನ ಗೋಡೆ ಶಿತ ಆವರಿಸಿದೆ ಮನೆಗಳಿಗೆ ಮಳೆ ನೀರು ನುಗ್ಗಲು ಕಾರಣ ಗ್ರಾಮದಲ್ಲಿ ಸರಿಯಾದ ರೀತಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕಾರಣ ಮತ್ತು ಸರಾಗವಾಗಿ ಚರಂಡಿ ನೀರು ಹೊರಗೆ ಹೋಗದೆ ಮನೆಗಳಿಗೆ ಮತ್ತು ಪುಟ್ಟಮ್ಮ ಅವರ ದನದ ಕೊಟ್ಟಿಗೆ ಮಳೆ ನೀರು ನುಗ್ಗಲು ಕಾರಣವಾಗಿದೆ ಇಷ್ಟೆಲ್ಲಾ ಆದರೂ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಸ್ಥಳೀಯರಾದ ಕುಮಾರ್ ಮಜು ಆರಾಧ್ಯ ಅವರು ದೂರಿದ್ದಾರೆ