ಅರಕಲಗೂಡು: ಕ್ಷೇತ್ರದ ಅಭಿವೃದ್ಧಿ ಪರವಾಗಿ ಚಿಂತನೆ ನಡೆಸಿದ್ದು ಇದಕ್ಕಾಗಿ ಜನರು ರಾಜಕೀಯವಾಗಿ ಬದಲಾವಣೆ ಬಯಸಬೇಕು ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಮನವಿ ಮಾಡಿದರು.
ತಾಲೂಕಿನ ವಿಜಿ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜನರು ರಾಜಕೀಯವಾಗಿ ಬದಲಾವಣೆ ತರದ ಕಾರಣ ಕ್ಷೇತ್ರದ ಅಭಿವೃದ್ಧಿ ಹಿಂದುಳಿದಿದೆ. ಹೀಗಾಗಿ, ಮತದಾರರು ಈ ಬಾರಿ ಬದಲಾವಣೆ ಬಯಸಬೇಕು ಎಂದು ತಿಳಿಸಿದರು.
ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಅನೇಕ ಯೋಜನೆಗಳನ್ನು ರೂಪಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಕ್ಕೆ ಆಗಮಿಸಿದ ಶ್ರೀಧರ್‌ಗೌಡ ಅವರನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ ಬರಮಾಡಿಕೊಂಡರು. ಗ್ರಾಮಸ್ಥರು ಆಯೋಜಿಸಿದ್ದ ಶ್ರೀಧರ್‌ಗೌಡ ಕಪ್ ಹೊನಲು ಬೆಳಕಿನ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಶ್ರೀನಿವಾಸ್, ಮಾಜಿ ಸದಸ್ಯ ಎ.ಡಿ. ಚಂದ್ರಶೇಖರ್, ಜಿಲ್ಲಾ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಗಣಪತಿ, ಮುಖಂಡರಾದ ಸೋಮಶೇಖರ್, ಕರವೇ ಅಧ್ಯಕ್ಷ ಜಿಮ್ ಸೋಮು, ಗ್ರಾಪಂ ಮಾಜಿ ಅಧ್ಯಕ್ಷ ರಾಮೇಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಂಗಣ್ಣ, ಗ್ರಾಪಂ ಮಾಜಿ ಸದಸ್ಯ ಮಲ್ಲೇಶ್, ಮುಖಂಡರಾದ ಪ್ರಕಾಶ್, ಪ್ರಸನ್ನ, ತಮ್ಮಯ್ಯ, ರಂಗಸ್ವಾಮಿ, ತಿಮ್ಮಣ್ಣ, ಬೇಕರಿ ಗಣೇಶ್, ಕುಮಾರ್, ಶ್ರೀನಿವಾಸ್, ಪರಶುರಾಮ, ಬಸವರಾಜು, ಸವಿ, ನಾಗರಾಜು ಇತರರು ಇದ್ದರು.