ಜಿಲ್ಲೆ

ಅಯ್ಯಪ್ಪಸ್ವಾಮಿಯ ಜಂಬೂ ಸವಾರಿ ಕಣ್ತುಂಬಿಕೊಂಡ ಜನರು

ಮೂಡಲಗಿ: ಪಟ್ಟಣದ ಶಿವಬೋಧರಂಗ ಮಠದ ರಸ್ತೆಯ ಅಯ್ಯಪ್ಪ ಸ್ವಾಮಿ ಸನ್ನಿಧಾನದ 31ನೇ ವರ್ಷದ ಮಹಾಪೂಜೆಯ ಉತ್ಸವದ ಮೆರವಣಿಗೆಗೆ ಸೋಮವಾರ ಬೆಂದೂರದ ರಾಜು ಶೆಟ್ಟಿ ಗುರುಸ್ವಾಮಿ, ಪಟ್ಟಣದ ರವಿ ಗುರುಸ್ವಾಮಿ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ನಿಂಗಪ್ಪ ಗುರುಸ್ವಾಮಿ, ಕಷ್ಣಪ್ಪ ಗಿರೆಣ್ಣವರ ಗುರುಸ್ವಾಮಿ, ಕಾರ್ಯಾನಿರತ ಪತ್ರಕರ್ತರ ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ, ಬಾಳಯ್ಯ ಹಿರೇಮಠ, ವಿನೋದ ಎಮ್ಮಿ ಜಂಬೂ ಸವಾರಿಗೆ ಚಾಲನೆ ನೀಡಿದರು.

ಅಯ್ಯಪ್ಪ ಸ್ವಾಮಿ ಜಂಬೂ ಸವಾರಿ ವೀಣೆಯನ್ನು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಪಟ್ಟಣದ ಜನರು ತಂಡೋಪ ತಂಡವಾಗಿ ಆಗಮಿಸಿ ವೀಸುವ ಮೂಲಕ ಕಣ್ತುಂಬಿಕೊಂಡರು. ನಾಡು&ನುಡಿ ಸಂಸತಿ ಪ್ರತಿಬಿಂಬಿಸುವ ಕನ್ನಡದ ವಿವಿಧ ಕಲಾತಂಡಗಳು, ಒಂಟೆ&ಕುದುರೆ ಮೆರವಣಿಗೆ, ಜಾಂಜ್​ಪಥಕ, ಡೊಳ್ಳು ಕುಣಿತ, ಸಾರವಾಡ ಗೊಂಬೆಗಳ ಕುಣಿತ, ಕುಂಭಮೇಳವು ಉತ್ಸವಕ್ಕೆ ಮೆರುಗು ನೀಡಿದವು. ಅಯ್ಯಪ್ಪ ಸ್ವಾಮಿ ಸನ್ನಿಧಾನದ ಮುಂಭಾಗದಲ್ಲಿ ಅಗ್ನಿಪೂಜೆ ಜರುಗಿತು. ಅಯ್ಯಪ್ಪಸ್ವಾಮಿ ಮೂರ್ತಿಯನ್ನು ಹೂವುಗಳಿಂದ ಸಿಂಗರಿಸಿ ಮಾಲಾಧಾರಿಗಳು ಭಕ್ತೀಗಿತೆ ಹಾಡಿದರು. ಪಟ್ಟಾಭಿಷೇಕ, 18 ಮೆಟ್ಟಿಲುಗಳಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯು ಪಟ್ಟಣದ ಶಿವಬೋಧರಂಗ ಮಠದಿಂದ ಪ್ರಾರಂಭವಾಗಿ ಕೊನೆಗೆ ಬಸವ ಮಂಟಪದ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ತಲುಪಿತು. ಮುನ್ಯಾಳದ ಡಾ. ಶಿವಲಿಂಗ ಮುರುರಾಜೇಂದ್ರ ಶಿವಾಚಾರ್ಯರು, ಸುಣಧೋಳಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.