ಜಿಲ್ಲೆ

ಅಯ್ಯಪ್ಪ ಸನ್ನಿಧಿಯಲ್ಲಿ ರಾಮತಾರಕ ಹೋಮ

ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ರಾಮೋತ್ಸವ ಆಚರಿಸಲು ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಸಿದ್ಧತೆ ನಡೆದಿವೆ.

ಬೆಳಗ್ಗೆ 7ಕ್ಕೆ ಆಂಜನೇಯ ಸ್ವಾಮಿ, ಮಹಾವಿಷ್ಣು ಮೂರ್ತಿಗೆ ಫಲ ಪಂಚಾಮೃತ ಅಭಿಷೇಕ, ವಿಶೇಷಾಲಂಕಾರ, ಅರ್ಚನೆ, ರಾಮತಾರಕ ಹೋಮ, ಹೂವಿನಾಲಂಕಾರ, ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಇರಲಿದೆ. ಸಂಜೆ ಉತ್ತರಾಭಿಮುಖವಾಗಿ ಅಯ್ಯಪ್ಪಸ್ವಾಮಿ ಗರ್ಭಗುಡಿ, ಆಂಜನೇಯ ಸ್ವಾಮಿ ಆವರಣದಲ್ಲಿ ಸಂಜೆ 6.30ಕ್ಕೆ ದೀಪಾರಾಧನೆ ಉದ್ಘಾಟನೆ ಆಗಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್ ಮನವಿ ಮಾಡಿದ್ದಾರೆ.