ನಾಲತವಾಡದಲ್ಲಿ ಕಲಶೋತ್ಸವದಲ್ಲಿ ಗಮನ ಸೆಳೆದ ಹುಬ್ಬಳ್ಳಿ ಜಗ್ಗಲಿಗೆ, ಗೊಂಬೆ ಕುಣಿತ. 
ಜಿಲ್ಲೆ

ಅಯ್ಯನಗುಡಿ ಉತ್ಸವಕ್ಕೆ ಅದ್ದೂರಿ ಚಾಲನೆ

ನಾಲತವಾಡ: ನಾಲ್ಕು ದಿನ ನಡೆಯಲಿರುವ ಸಮೀಪದ ಅಯ್ಯನಗುಡಿ ಗಂಗಾಧರೇಶ್ವರ ಜಾತ್ರೆಯ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ತಬ್ದ ಚಿತ್ರಗಳ ಮೆರವಣಿಗೆಯೊಂದಿಗೆ ಅದ್ದೂರಿ ಕಲಶೋತ್ಸವ ಭಾನುವಾರ ನಡೆಯಿತು.

ಶಾಸಕ, ಸೋಪ್ಸ್ ಮತ್ತು ಡಿಟರ್ಜಂಟ್ ನಿಗಮ ಅಧ್ಯಕ್ಷ ಸಿ.ಎಸ್.ನಾಡಗೌಡ, ಮುನ್ನಾ ಧಣಿ, ನಾನಾಸಾಹೇಬ ನಾಡಗೌಡ, ಪ.ಪಂ ಸದಸ್ಯ ಪೃತ್ವಿರಾಜ ನಾಡಗೌಡ, ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಉತ್ಸವಕ್ಕೆ ಚಾಲನೆ ನೀಡಿದರು.

ವೀರಗಾಸೆ, ಹುಬ್ಬಳ್ಳಿಯ ಜಗ್ಗಲಿ, ಮಂಗಳೂರಿನ ಜೋಗುತಿ ನೃತ್ಯ, ಉಪ್ಪಲದಿನ್ನಿಯ ಹೆಜ್ಜೆ ಮೇಳ, ಬಬಲೇಶ್ವರದ ಡೊಳ್ಳಿನ ಕುಣಿತ, ಸಾರವಾಡದ ಗೊಂಬೆ ಕುಣಿತ, ಬ್ಯಾಂಜೋ ಸೆನಾಯಿ ಮೇಳ, ಮಂಗಳಮುಖಿಯರ ನೃತ್ಯ ಗಮನ ಸೆಳೆಯಿತು.

ಸಂಘ ಸಂಸ್ಥೆಯವರು, ಸ್ಥಳೀಯ 25ಕ್ಕೂ ಹೆಚ್ಚು ಶಾಲೆಗಳ ಮಕ್ಕಳಿಂದ ಕಾಯಕ ಶರಣರು, ಸಾಹಿತಿಗಳು, ಡಾ.ಬಿ.ಆರ್.ಅಂಬೇಡ್ಕರ್, ಸ್ವಾತಂತ್ರೃ ಹೋರಾಟಗಾರರು, ಸಾಧಕಿಯರು, ಶಿವಶರಣರು, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಬೇಟಿ ಬಚಾವ್ ಬೇಟಿ ಪಢಾವೋ, ಬಸವೇಶ್ವರ ಸ್ತಬ್ದ ಚಿತ್ರಗಳು ಗಮನ ಸೆಳೆದವು.

ಗಣ್ಯರಾದ ರಾಯನಗೌಡ ತಾತರಡ್ಡಿ, ಶಿವಪ್ಪಗೌಡ ತಾತರಡ್ಡಿ, ಮಲ್ಲಪ್ಪ ಮುದ್ನೂರ, ಅಶೋಕ ಇಲಕಲ್, ಬಸವರಾಜ ಡೇರೆದ, ಮಲ್ಲಿಕಾರ್ಜುನ ಹಿರೇಮಠ, ಮುತ್ತು ಗೊರಬಾಳ, ಸಂಗಣ್ಣ ಮುರಾಳ, ರಫೀಕ್ ಡಖಣಿ, ಉಮರಾರೂಕ ಮೂಲಿಮನಿ, ಅಮರಪ್ಪ ಬಾವಿಕಟ್ಟಿ, ಎಲ್.ಎಚ್.ಅವಟಿ, ರಜಾಕಸಾಬ್ ನಾಯ್ಕೋಡಿ, ದಾವಲಸಾಬ ಸುಲ್ತಾನಪುರ, ಎನ್.ಎಚ್.ಕೊಣ್ಣೂರ, ಪ.ಪಂ ಸದಸ್ಯರಾದ ಸಂಗಣ್ಣ ಬಾರಡ್ಡಿ, ಶಿವಪುತ್ರಪ್ಪ ಗುರಿಕಾರ, ಕಾಶೀಮಸಾಬ ಎತ್ತಿನಮನಿ, ನಬಿಲಾಲ ಸುಗಂದಿ, ಬಾಲಚಂದ್ರ ಗದಗಿನ, ಅಲ್ಲಾಬಕ್ಷ ಮೂಲಿಮನಿ, ಸಿದ್ದಣ್ಣ ಕಟ್ಟಿಮನಿ, ಬಸವರಾಜ ಗಂಗನಗೌಡರ, ಸಂಗು ಗಂಗನಗೌಡರ, ಇಮಾಮಲಿ ಮಲಗಲದಿನ್ನಿ, ಬಾಬು ಹಳ್ಳೂರ, ಅಮರಪ್ಪ ಬಾವಿಕಟ್ಟಿ, ಮಲ್ಲಿಕಾರ್ಜುನ ಹಿರೇಮಠ, ಲಾಳೇಸಾಬ ಇಸ್ಲಾಂಪುರ, ಭೀಮಣ್ಣ ಲೊಟಗೇರಿ, ಹಣಮಂತ ಕಡದರಾಳ ಇದ್ದರು.