ಜಿಲ್ಲೆ

ಅಯೋಧ್ಯೆಗೆ ಹೊರಟ ರಾಮಭಕ್ತರು

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ವಿಭಾಗದಿಂದ ಅಯೋಧ್ಯೆ ಧಾಮ ಆಸ್ತಾ ವಿಶೇಷ ರೈಲಿನ ಮೂಲಕ ಅಯೋಧ್ಯೆಗೆ ಹೊರಟ ಸಾವಿರಾರು ರಾಮ ಭಕ್ತರ ಪ್ರಯಾಣಕ್ಕೆ ಸೋಮವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿ, ಪ್ರಯಾಣಕ್ಕೆ ಶುಭ ಕೋರಲಾಯಿತು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ, ವಿಧಾನಪರಿಷತ್ ಉಪ ನಾಯಕ ಸುನೀಲï ವಲ್ಯಾಪುರೆ, ಶಾಸಕ ಬಸವರಾಜ ಮತ್ತಿಮಡು, ಎಂಎಲ್‌ಸಿ ಬಿ.ಜಿ. ಪಾಟೀಲ್, ಚಂದು ಪಾಟೀಲ್, ಶಿವರಾಜ ಪಾಟೀಲ್ ರz್ದೆÃವಾಡಗಿ ಸೇರಿ ಹಲವು ಮುಖಂಡರು ಹಸಿರು ನಿಶಾನೆ ತೋರಿಸಿ, ಯಾತ್ರೆಗೆ ಬೀಳ್ಕೊಟ್ಟರು.

ಪ್ರತಿ ಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ನಾಲ್ಕು ಜಿಲ್ಲೆಗಳಲ್ಲಿ ಸುಮಾರು ೪೦ ಲಕ್ಷ ಜನರಿದ್ದು, ಕೆಲವೇ ಸಾವಿರ ಭಕ್ತರನ್ನು ಶ್ರೀರಾಮ ಆಯ್ಕೆ ಮಾಡಿಕೊಂಡು ತನ್ನ ಬಳಿಗೆ ಕರೆಯಿಸಿಕೊಳ್ಳುತ್ತಿದ್ದಾನೆ. ಸಕಲ ಸೌಕರ್ಯ ನೀಡಲಾಗುತ್ತಿದೆ. ಆದರೆ ನಾವು ೧೯೯೨ರಲ್ಲಿ ಅಯೋಧ್ಯೆಗೆ ಹೊರಟಾಗ ಊರೆಲ್ಲ ಮೆರವಣಿಗೆ ಮಾಡಿದ್ದರು. ವಾಪಸ್ ಬರಲ್ಲ ಎಂದಿದ್ದರು. ಗ್ರಾಮಸ್ಥರು ನೀಡಿದ ಬುತ್ತಿ ಕಟ್ಟಿಕೊಂಡು ರೈಲಿನಲ್ಲಿ ಎ¯್ಲÉಂದರಲ್ಲಿ ಮಲಗಿಕೊಂಡು ಅಯೋಧ್ಯೆ ತಲುಪಿ, ಕರಸೇವೆ ಮಾಡಿ. ಇದೀಗ ಎಲ್ಲರೂ ಸುಖ ಪ್ರಯಾಣದೊಂದಿಗೆ ರಾಮ ದರ್ಶನ ಮಾಡುತ್ತೀದ್ದೀರಿ. ದೇಶಕ್ಕೆ ಒಳ್ಳೆಯದಾಗಬೇಕು, ಹಿಂದೂ ಧರ್ಮ ಉಳಿಯಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದರು.


ಬಿಗಿ ಬಂದೋಬಸ್ತ್: ಅಯೋಧ್ಯೆ ಧಾಮ ಆಸ್ತಾ ರೈಲು ಸಂಚಾರದ ಹಿನ್ನೆಲೆಯಲ್ಲಿ ನಿಲ್ದಾಣದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಫ್ಲಾಟ್‌ಫಾರ್ಮ್ ಪ್ರವೇಶ ದ್ವಾರದಲ್ಲಿ ಪ್ರತಿಯೊಬ್ಬರನ್ನು ತಪಾಸಿಸಿ, ಒಳಬಿಡಲಾಯಿತು. ರಾಮಭಕ್ತರು ಬಿಟ್ಟರೆ ಪೊಲೀಸರು ಮಾತ್ರ ಕಾಣಿಸುತ್ತಿದ್ದರು. ಬೇರೆ ಪ್ರಯಾಣಿಕರಿಗೆ ಫ್ಲಾಟ್‌ಫಾರ್ಮ್ ಮೇಲೂ ಪ್ರವೇಶವಿರಲಿಲ್ಲ.

ಯಾತ್ರಾ ಸಂಚಾಲಕ ಜಗದೀಶ ಹಿರೇಮನಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಪ್ರಮುಖರಾದ ಈಶ್ವರ್‌ಸಿಂಗ್ ಠಾಕೂರ, ಸಿz್ದÁಜಿ ಪಾಟೀಲ್, ಶಶಿಕಲಾ ಟೆಂಗಳಿ, ಡಾ.ಅಂಬಾರಾಯ ಅಷ್ಟಗಿ, ಶೋಭಾ ಬಾಣಿ, ಅಶೋಕ ಬಗಲಿ, ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ಶಿವಯೋಗಿ ನಾಗನಹಳ್ಳಿ, ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ ಇದ್ದರು.