ಜಿಲ್ಲೆ

ಅಯೋಧ್ಯೆ ಅಕ್ಷತೆ ಮೆರವಣಿಗೆ ಇವತ್ತು

ಚಿತ್ರದುರ್ಗ:ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಬಂದಿರುವ ಮಂತ್ರಾಕ್ಷತೆಯನ್ನು ತಾಲೂಕು ಕೇಂದ್ರಗಳಿಗೆ ವಿತರಿಸುವ ಕಾರ‌್ಯಕ್ರಮವನ್ನು ಡಿ.27ರಂದು ಬೆಳಗ್ಗೆ 10ಕ್ಕೆ ನಗರದ ಡಿಸಿಸಿ ಬ್ಯಾಂಕ್ ಬಳಿಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿದೆ. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಅಕ್ಷತೆಯ ಮೆರವಣಿಗೆ ಇರುತ್ತದೆ. ಜಿಲ್ಲೆಯ ವಿವಿಧ ಮಠಾಧೀಶರು, ಪ್ರಮುಖರು, ಅಭಿಯಾನದ ಸಂಚಾಲಕರು, ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಈ ಕಾರ‌್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.