ಜಿಲ್ಲೆ

ಅಯೋಧ್ಯಾ ನಗರ ಪಾಲಿಕೆಗೆ ಸೇರಿಸಿ

ಕಲಬುರಗಿ ಜಫರಾಬಾದ್ ಸರ್ವೇ ನಂ.೨೦ರ ನಗರದ ವಾರ್ಡ್ ೯ರ ಅಯೋಧ್ಯ ನಗರವನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಶ್ರೀ ಅಯೋಧ್ಯ ನಗರದ ಹೋರಾಟ ಸಮಿತಿಯಿಂದ ಬುಧವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.

ಅಯೋಧ್ಯ ನಗರದ ನೂರಾರು ನಿವಾಸಿಗಳು ಮಹಾನಗರ ಪಾಲಿಕೆಯ ಎದುರು ಪ್ರತಿಭಟನೆ ನಡೆಸಿದರು. ನಾವು ಪಾಲಿಕೆಗೆ ಮನೆ ತೆರಿಗೆ ಪಾವತಿಸುತ್ತೇವೆ, ಪಾಲಿಕೆ ನೀರಿನ ಸೌಲಭ್ಯ ಕೊಡುತ್ತದೆ, ರಸ್ತೆ ವಿದ್ಯುತ್ ಸೌಲಭ್ಯ ಪಾಲಿಕೆಯಿಂದಲೇ ಸಿಗುತ್ತದೆ, ಪಾಲಿಕೆಯ ಕಸ ವಾಹನ ಬರುತ್ತದೆ. ಆದ್ದರಿಂದ ಅಯೋಧ್ಯ ನಗರವನ್ನು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಮ್ಮ ಬೇಡಿಕೆಗಳ ಮನವಿಯುಳ್ಳ ಪುತ್ರವನ್ನು ಪಾಲಿಕೆ ಅಧಿಕಾರಿಗಳಿಗೆ ಸಲ್ಲಿಸಿದರು. ಪ್ರಮುಖರಾದ ಬಾಪುಗೌಡ ಮಾಲಿಪಾಟೀಲ್, ಸಂತೋಷ ಚವ್ಹಾಣ್, ಸಿದ್ರಾಮಶಂಕರ ಗೌಡ ಪಾಟೀಲ್, ನೀಲಮ್ಮ ಧೂಳಕರವಾರ್, ಸಂಗೀತಾ, ಜಗದೇವಿ ಲಿಂಗಯ್ಯ ಮಠಪತಿ, ಮಲ್ಲಮ್ಮ ಗೋಳಾ, ಧಜರಾಜ, ಕರಬಸಯ್ಯ, ಶಿವಕುಮಾರ ಪಂಚಾಳ, ವಿಜಯಲಕ್ಷ್ಮೀ, ಚಂದ್ರಕಲಾ, ಜಯಶ್ರೀ, ತುಕಾರಾ ಅದುವೆ, ಚಿದಂಬರ ಪಂಚಾಳ, ಲಕ್ಷಿಬಾಯಿ ಅಷ್ಟಗಿ, ಶಿವಕುಮಾರ ಕುಂಬಾರ, ರೇವಣಸಿದ್ದಪ್ಪ ಕುಂಬಾರ, ಶರಣಬಸಪ್ಪ ಮಾಲಿಬಿರಾದಾರ, ಲಕ್ಷ್ಮಣ ಬೋಸಲೆ ಇತರರಿದ್ದರು.