ಜಿಲ್ಲೆ

ಅಯೋಧ್ಯಾ ದರ್ಶನ ಒಂದು ಸೌಭಾಗ್ಯ

ಬಾಗಲಕೋಟೆ: ಅಯೋಧ್ಯಾ ದರ್ಶನ ಮಾಡುವುದೇ ಒಂದು ಸೌಭಾಗ್ಯ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಶನಿವಾರ ಅಯೋಧ್ಯಾ ಕ್ಷೇತ್ರಕ್ಕೆ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ಶ್ರೀರಾಮನ ಸನ್ನಿಧಾನ ವೀಕ್ಷಣೆ ಮಾಡಿದ ಅವರು, ಅಯೋಧ್ಯಯಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಿಸುವುದು ಬಹು ವರ್ಷಗಳ ಕನಸು ನನಸಾಗುತ್ತಿದೆ ಎಂದರು.

ಆಯೋಧ್ಯ ಶ್ರೀರಾಮ ಮಂದಿರ, ಶ್ರೀರಾಮನ ಮೂಲ ವಿಗ್ರಹ ಕೆತ್ತುವ ಸಾಲಿಗ್ರಾಮ ಹಾಗೂ ಸರಿಯೊ ನದಿ ತೀರದ ದರ್ಶನ ಪಡೆದು ನಂತರ ಶ್ರೀರಾಮ ಮಂದಿರ ನಿರ್ಮಾಣದ ಸಂಪೂರ್ಣ ಮಾಹಿತಿ ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ರಾಮ ಮಂದಿರ ನಿರ್ಮಾಣ ಸಮಿತಿಯ ಉಸ್ತುವಾರಿ ಗೋಪಾಲಜಿ ಅವರಿಂದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಹಾಂತೇಶ ಶೆಟ್ಟರ, ಲಕ್ಷ್ಮೀನಾರಾಯಣ ಕಾಸಟ್ ಸೇರಿದಂತೆ ಅನೇಕರು ಇದ್ದರು.