ಜಿಲ್ಲೆ

ಅಮ್ಮನಘಟ್ಟಿ ಜೇನುಕಲ್ಲಮ್ಮ ದೇವಿ ಜಾತ್ರೆ: ಭಕ್ತರಿಂದ ಹರಕೆ ಸಮರ್ಪಣೆ

ರಿಪ್ಪನ್‌ಪೇಟೆ: ಸಮೀಪದ ಕೋಡೂರು ಗ್ರಾಪಂ ವ್ಯಾಪ್ತಿಯ ಅಮ್ಮನಘಟ್ಟಿ ಶ್ರೀ ಜೇನುಕಲ್ಲಮ್ಮ ದೇವಿಯ 2ನೇ ವಾರದ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಭಾದ್ರಪದ ಮಾಸದ ಮಹಾಲಯ ಅಮವಾಸ್ಯೆವರೆಗೆ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. ರೈತಾಪಿ ವರ್ಗದವರು ತಮ್ಮ ಹೊಲದಲ್ಲಿ ಉತ್ತಮ ಮಳೆ-ಬೆಳೆ ಹಾಗೂ ಕುಟುಂಬದ ಅಭಿವೃದ್ಧಿ, ಜಾನುವಾರುಗಳ ಆರೋಗ್ಯಕ್ಕಾಗಿ ಹರಕೆ ನಾಗ ಸಮರ್ಪಿಸಿದರು.