ಜಿಲ್ಲೆ

ಅಮೆರಿಕ ಉಪಾಧ್ಯ ಭಾರತ ಭೇಟಿಗೆ ವಿರೋಧ

ಕಲಬುರಗಿ: ಅಮೆರಿಕ ಉಪಾಧ್ಯ ಜೆಡಿ ವ್ಯಾನ್ಸ್​ ಭಾರತ ಭೇಟಿ ವಿರೋಧಿಸಿ "ಭಾರತ ಮಾರಾಟಕ್ಕಿಲ್ಲ' ಎಂಬ ಬಲವಾದ ಸಂದೇಶ ರವಾನಿಸಲು ಏ.೨೧ರಂದು ಗ್ರಾಮ, ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ರ‍್ನಾಟಕ ಪ್ರಾಂತ ರೈತ ಸಂ ಕರೆ ನೀಡಿದ್ದು, ಅದಕ್ಕೆ ಭಾರತ ಕಮ್ಯುನಿಸ್ಟ್​ ಪ (ಸಿಪಿಐಎಂ) ಬೆಂಬಲಿಸಲಿದೆ ಎಂದು ಜಿಲ್ಲಾ ಕರ‍್ಯರ‍್ಶಿ ಕೆ.ನೀಲಾ ತಿಳಿಸಿದ್ದಾರೆ. ಡೊನಾಲ್ಡ್​ ಟ್ರಂಪ್​ ಭಾರತದ ವಿರುದ್ಧ ಸುಂಕ ಸಮರ ಸಾರಿ ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಮಾರುಕಟ್ಟೆ, ಕೈಗಾರಿಕಾ ಬಿಡಿ ಉತ್ಪನ್ನಗಳನ್ನು ಸುಂಕಮುಕ್ತ ಮಾಡಲು ಒತ್ತಡ ಹೇರುತ್ತಿದೆ. ಈ ಹಿನ್ನೆಲೆಯಲ್ಲಿ ಉಪಾಧ್ಯರ ಭೇಟಿ ದೇಶದ ಕೋಟ್ಯಂತರ ರೈತರಿಗೆ ಮರಣ ಶಾಸನವಾಗಲಿದ್ದು, ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭೇಟಿ ವೇಳೆ ಒತ್ತಡಕ್ಕೆ ಮಣಿಯದೇ ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ ಸೇರಿ ಇಡೀ ಕೃಷಿಯನ್ನು ಮಾತುಕತೆಯಿಂದ ಹೊರಗಿಡಬೇಕು ಎಂದು ಆಗ್ರಹಿಸಿದ್ದಾರೆ.