ಗದಗ: ಜಗದ್ಗುರು ಪಂಚಾಚಾರ್ಯ ಅಮೃತವಾಹಿನಿ ಟ್ರಸ್ಟ್ ವತಿಯಿಂದ ಫೆ.17ರಂದು ಸಂಜೆ 6 ಗಂಟೆಗೆ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಅಮೃತವಾಹಿನಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷರಾಗಿದ್ದ ದಿ. ಬಸಣ್ಣ ದುಂಡಪ್ಪ ಮಲ್ಲಾಡದ ಅವರ ಕ್ರಿಯಾಶೀಲ ವ್ಯಕ್ತಿತ್ವದ ಕುರಿತು ಉಪನ್ಯಾಸ ಜರುಗಲಿದೆ.
ರಂಭಾಪುರಿ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಭಗವತ್ಪಾದರು ಸಾನ್ನಿಧ್ಯ ವಹಿಸುವರು. ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು, ಹೂಲಿ ಹಿರೇಮಠದ ಶಿವಮಹಾಂತ ಸ್ವಾಮೀಜಿ, ಸೂಡಿಯ ಡಾ. ಕೊಟ್ಟೂರು ಬಸವೇಶ್ವರ ಶ್ರೀಗಳು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಬ್ಬಿಗೇರಿ ಸೋಮಶೇಖರ ಸ್ವಾಮೀಜಿ ಅವರಿಂದ ಉಪದೇಶಾಮೃತ ಜರುಗಲಿದೆ.
ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ಗಂಗಣ್ಣ ಮಹಾಂತ ಶೆಟ್ಟರ, ಡಿ.ಆರ್. ಪಾಟೀಲ, ಪತ್ರಕರ್ತ ಮಂಜುನಾಥ ಅಬ್ಬಿಗೇರಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಕುರಡಗಿ, ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜಣ್ಣ ಬೇಲೇರಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ವರ್ತಕ ಜಿ.ಎಂ. ಚಿಕ್ಕಮಠ, ಬಾಬಣ್ಣ ಭೋರಟ್ಟಿ , ವಾಗೀಶ ನಂಜಯ್ಯನವರ, ಸುಧೀರ ಮಾಳಶೆಟ್ಟಿ, ಕೆ.ಎಸ್. ಚಟ್ಟಿ, ಚಂದ್ರಣ್ಣ ಬಾಳಿಹಳ್ಳಿಮಠ, ಈಶಣ್ಣ ಬಳ್ಳೊಳ್ಳಿ ಅವರಿಗೆ ಗುರುರಕ್ಷೆ ನೀಡಲಾಗುವುದು. ಮಲ್ಲಾಡದ ಪರಿವಾರದವರು ಭಕ್ತಿ ಸೇವೆ ವಹಿಸಿಕೊಂಡಿದ್ದಾರೆ ಎಂದು ಅಮೃತವಾಹಿನಿ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಶಿಗ್ಲಿ, ಕಾರ್ಯದರ್ಶಿ ಶಿವಾನಂದಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.