ಜಿಲ್ಲೆ

ಅಮೂಲ್‌ನೊಂದಿಗೆ ಕೆಎಂಎಫ್ ವಿಲೀನ ವಿರೋಧ!?..

ಹಾಸನ : ಅಮೂಲ್‌ನೊಂದಿಗೆ ಕೆಎಂಎಫ್ ವಿಲೀನ ವಿರೋಧಿಸಿ ಜೆಡಿಎಸ್ ಪಕ್ಷ , ರೈತರು,ಹಾಲು ಉತ್ಪಾದಕರ ಸಂಘದ ಸದಸ್ಯರು ಒಳಗೊಂಡಂತೆ ಜ.12ರಂದು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ 11 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ ತಿಳಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ , ಶಾಸಕರಾದ ಎ ಟಿ ರಾಮಸ್ವಾಮಿ, ಶಿವಲಿಂಗೇಗೌಡ ,ಸಿ.ಎನ್ ಬಾಲಕೃಷ್ಣ ,ಲಿಂಗೇಶ್, ಎಚ್.ಕೆ. ಕುಮಾರಸ್ವಾಮಿ, ಸೇರಿದಂತೆ ಜೆಡಿಎಸ್ ನ ಮುಖಂಡರು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚಿಗೆ ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತಿನ ಅಮೂಲ್ ಡೈರಿಯೊಂದಿಗೆ ರಾಜ್ಯದ ಕೆಎಂಎಫ್ ಅನ್ನುವಿಲೀನಗೊಳಿಸುವುದಾಗಿ ತಿಳಿಸಿದ್ದಾರೆ. ಈ ರೀತಿ ಮಾಡುವುದರಿಂದ ರಾಜ್ಯದ ಹಾಲು ಉತ್ಪಾದಕರು, ೈತರಿಗೆ ಅನ್ಯಾಯವಾಗಲಿದ್ದು ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಹೈನೋಧ್ಯಮವನ್ನೇ ನಂಬಿ ಲಕ್ಷಾಂತರ ಮಂದಿ ಬದುಕು ಸಾಗಿಸುತ್ತಿದ್ದಾರೆ ಪ್ರತಿದಿನ 85 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು ವಾರ್ಷಿಕ 20 ಸಾವಿರ ಕೋಟಿ ವಹಿವಾಟು ನಡೆಸಲಾಗುತ್ತಿದೆ. ಇಂತಹ ಕೆಎಂಎಫ್ ಅನ್ನು ವಿಲೀನ ಮಾಡಿದರೆ ರೈತರಿಗೆ, ಹಾಲು ಉತ್ಪಾದಕರಿಗೆ
ಸಾಲ ಸೌಲಭ್ಯ ಹಾಗೂ ಸಮಯಕ್ಕೆ ಸರಿಯಾಗಿ ಹಣ ಪಾವತಿಸುವಲ್ಲಿ ವಿಳಂಬವಾಗಲಿದೆ.ಆದ್ದರಿಂದ ಕೇಂದ್ರ ಸರ್ಕಾರ ನಿರ್ಧಾರವನ್ನು ಕೈ ಬಿಡಬೇಕಿದೆ. ಈಗಾಗಲೇ ರಾಜ್ಯದ ಸಿಂಡಿಕೇಟ್‌ಬ್ಯಾಂಕ್, ವಿಜಯ ಬ್ಯಾಂಕ್ ಹಾಗೂ ಇತರೆ ಬ್ಯಾಂಕುಗಳನ್ನು ವಿಲೀನ ಮಾಡಿದ ಪರಿಣಾಮ
ಎದುರಿಸುತ್ತಿದ್ದೇವೆ. 14 ಒಕ್ಕೂಟಗಳ ಒಳಗೊಂಡ ಕೆಎಂಎಫ್ ಅನ್ನು ವಿಲೀನ ಮಾಡುವುದು ಬೇಡ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೊಂಗೇರಿ ರಘು, ಶೇಷಾದ್ರಿ, ದಿನೇಶ್, ಸೈಯದ್ ಅಕ್ಬರ್ ಇದ್ದರು.