ಗದಗ:
ರಾಜ್ಯದಲ್ಲಿ ಅಮುಲ್ ಉತ್ಪನ್ನಗಳ ಮಾರಾಟ ನಿಷೇಧಿಸಲು ಆಗ್ರಹಿಸಿ ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ರಣಾ ವೇದಿಕೆ ಜಿಲ್ಲಾ ಟಕದ ವತಿಯಿಂದ ಅಮುಲ್ ಉತ್ಪನ್ನಗಳನ್ನು ರಸ್ತೆಗೆ ಎಸೆದು, ಭಾವಚಿತ್ರಗಳಿಗೆ ಬೆಂಕಿ ಹಚ್ಚುವ ಮೂಲಕ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ಕರವೇ ಜಿಲ್ಲಾ ಅಧ್ಯ ಶರಣು ಗೋಡಿ ಮಾತನಾಡಿ, ಅಮುಲ್ ಸಂಸ್ಥೆ ಕನ್ನಡಿಗರ ಭಾವನೆ ಜೊತೆ ಆಟ ಆಡುತ್ತಿದೆ. ಅಮುಲ್ ಹಾಲು, ಮೊಸರು, ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಕನ್ನಡಿಗರ ಕಟ್ಟಿದ ಹೆಮ್ಮೆಯ ಸಂಸ್ಥೆ ಕೆಎಂಎ್ ನಂದಿನಿ ಬ್ರಾಂಡ್ ಕನ್ನಡಿಗರ ಆಸ್ಮಿತೆಯಾಗಿದ್ದು, ಅದನ್ನು ನಾಶಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಟಕದ ಅಧ್ಯ ನಿಂಗನಗೌಡ ಮಾಲಿಪಾಟೀಲ್, ಜಿಲ್ಲಾ ಉಪಾಧ್ಯ ಹನುಮಂತ ಪೂಜಾರ, ಯುವ ಟಕದ ಜಿಲ್ಲಾ ಉಪಾಧ್ಯ ಮಾರುತಿ ಈಳಗೇರ, ರಾಮನಗೌಡ ಹಳಿಮನಿ, ಕಿಲ್ಲೆದಾರ್, ಮಹಾದೇವಿ ದೊಡ್ಡಗೌಡ್ರು, ಹುಸೇನ ಅಕ್ಕಿ, ಪವನ್ ಕರಿನಾಯ್ಕರ್ ಇದ್ದರು.