ಜಿಲ್ಲೆ

ಅಮಿತ್ ಷಾ ವಿರುದ್ಧ ಕ್ರಮಕೈಗೊಳ್ಳಲಿ

ಬೈಲಹೊಂಗಲ: ಡಾ.ಬಿ.ಆರ್.ಅಂಬೇಡ್ಕರ್ ಕುರಿತಾಗಿ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಡಿಪಿಐ ಪಕ್ಷದ ವತಿಯಿಂದ ಪಟ್ಟಣದಲ್ಲಿ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಶನಿವಾರ ಸಲ್ಲಿಸಲಾಯಿತು.

ಎಸ್‌ಡಿಪಿಐ ತಾಲೂಕಾಧ್ಯಕ್ಷ ಮಲಿಕಜಾನ್ ಮುಲ್ಲಾ ಮಾತನಾಡಿ, ಅಮಿತ್ ಷಾ ಅವರಿಗೆ ಗೃಹ ಸಚಿವರಾಗುವ ಅರ್ಹತೆ ಇಲ್ಲ. ಅಂಬೇಡ್ಕರ್ ಬಗ್ಗೆ ಬಿಜೆಪಿಗಿರುವ ಭಾವನೆ ಅಮಿತ್ ಷಾ ಮೂಲಕ ಹೊರಬಿದ್ದಿದೆ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇಲಿಯಾಸ್ ದೊಡ್ಡಮನಿ, ಮುಖ್ತಾರ್ ಬಾಗೇವಾಡಿ, ಆಕೀಬ ಪಟ್ಟಿಹಾಳ, ಮುಜಾರ್ ಬಾಗವಾನ, ರುದ್ರಪ್ಪ ಗರ್ಜೂರ, ಸುರೇಶ ರಾಯಪ್ಪಗೊಳ, ವಸಿಮ್ ಮುಜಾವರ ಇತರರಿದ್ದರು.