ಚಿಕ್ಕಮಗಳೂರು: ಕಾಶ್ಮೀರದಲ್ಲಿ ನಡೆದ ಅಮಾಯಕ ಹಿಂದುಗಳ ಹತ್ಯೆ ಖಂಡಿಸಿ ಬಿಜೆಪಿ ಕಡವಂತಿ ಶಕ್ತಿ ಕೇಂದ್ರದ ಬೊಗಸೆ ಬೂತ್‌ನ ದೇವರಗದ್ದೆ ಬಸ್ ನಿಲ್ದಾಣದ ವೃತ್ತದಲ್ಲಿ ಗುರು ವಾರ ರಾತ್ರಿ ದೀಪ ಬೆಳಗಿಸುವ ಮೂಲಕ ಮೌನ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕಡವಂತಿ ಗ್ರಾಪಂ ಸದಸ್ಯ ವಿನೋದ್ ಬೊಗಸೆ, ಪಕ್ಷಾತೀತವಾಗಿ, ಜಾತಿ ರಹಿತವಾಗಿ ನಾವೆಲ್ಲರೂ ಒಂದು-ನಾವೆಲ್ಲರೂ ಹಿಂದೂ, ನಮಗೆಲ್ಲರಿಗೂ ಇರುವುದು ಒಂದೇ ದೇಶ ಅದು ಭಾರತ ದೇಶ ಎಂಬ ಭಾವನೆಯಿಂದ ಒಟ್ಟಾಗಿ ಬದುಕಬೇಕು ಎಂದರು.
ಹೀನ ಕೃತ್ಯ ಎಸಗಿ, ದೇಶಕ್ಕೆ ಗೌರವ ತೋರಿದವರು, ನಮ್ಮಲ್ಲಿದ್ದು ನಮ್ಮಗಳ ಮೇಲೆ ಸಂಚು ರೂಪಿಸುವ ಪ್ರತಿಯೊಬ್ಬರಿಗೂ ಗುಂಡಿಕ್ಕಬೇಕು. ಹಿಂದುಗಳ ಹತ್ಯೆಯನ್ನು ಖಂಡಿಸಿ ದೇಶದಾದ್ಯಂತ ಪ್ರತಿ ಬೂತಿನಲ್ಲೂ ಪ್ರತಿಭಟನೆ ಮಾಡಿ ಪ್ರತಿಯೊಬ್ಬ ಹಿಂದೂಗಳಿಗೂ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಹಿಂದುಗಳ ಹತ್ಯೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನಕ್ಕೆ ಭಾರತ ಪ್ರತೀಕಾರದ ದಾಳಿಗೆ ತಿರುಗೇಟು ನೀಡಿದೆ. ಆರ್ಥಿಕತೆ ಮೇಲೆ ಐದಂಶದ ರಾಜಾತಾಂತ್ರಿಕ ಸರ್ಜಿಕಲ್ ಸ್ಟೆÊಕ್ ಮಾಡಿದೆ. ಸಿಂಧು ನದಿ ಜಲ ಒಪ್ಪಂದಕ್ಕೆ ತಕ್ಷಣ ಬ್ರೇಕ್, ಅಟ್ಟಾರಿ ಗಡಿ ಬಂದ್, ವೀಸಾ ರದ್ದು, ರಾಯಬಾರಿ ಕಚೇರಿ ಸಿಬ್ಬಂದಿ ಕಡಿತ, ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಇಳಿಸಿ ತಕ್ಕ ಪಾಠ ಕಲಿಸಿದೆ ಎಂದು ಹೇಳಿದರು.
ಪ್ರತಿಯೊಬ್ಬ ಹಿಂದುಗಳು, ಭಾರತೀಯರು ಎಲ್ಲರೂ ಒಟ್ಟಾಗಿ ನಿಲ್ಲಬೇಕು. ನಮ್ಮ ಹಿಂದೂ ರಾಷ್ಟçವನ್ನು ಬಲಿಷ್ಠಗೊಳಿಸಿ, ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮುಕುಂದ ಶೆಟ್ಟಿ, ದಾನಪ್ಪ ಶೆಟ್ಟಿ, ಶಿವಣ್ಣಗೌಡ, ದೇವರಾಜ್, ಪೂರ್ಣೇಶ್, ಸಂತೋಷ್, ರಾಮಚಂದ್ರ, ಸತೀಶ್ ಮತ್ತಿತರರಿದ್ದರು.