ಜಿಲ್ಲೆ

ಅಭ್ಯಾಸಕ್ಕೆ ವಯಸ್ಸು ಮುಖ್ಯವಲ್ಲ

ಚಿತ್ರದುರ್ಗ: ಯೋಗಾಭ್ಯಾಸಕ್ಕೆ ವಯಸ್ಸು ಮುಖ್ಯವಲ್ಲ. ಕಲಿಯುವ ಆಸಕ್ತಿ ಇರಬೇಕು ಎಂದು ಯೋಗಗುರು ಶಿವಲಿಂಗಪ್ಪ ತಿಳಿಸಿದರು. ನಗರದ ಐಯುಡಿಪಿ ಬಡಾವಣೆಯಲ್ಲಿರುವ ಪ್ರಶಾಂತಿ ವಿದ್ಯಾಲಯದಲ್ಲಿ ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು. ಯೋಗವಿಂದು ಹೆಮ್ಮರವಾಗಿ ಬೆಳೆದಿದ್ದು, ವೈದ್ಯಕೀಯ ಲೋಕಕ್ಕೆ ಸವಾಲಾಗಿ ನಿಂತಿದೆ. ಔಷಧೋಪಚಾರಗಳಿಂದ ಗುಣವಾಗದ ರೋಗಗಳನ್ನು ವಾಸಿ ಮಾಡುವ ಶಕ್ತಿ ಯೋಗಕ್ಕಿದೆ. ಹೀಗಾಗಿ ದೇಶ ವಿದೇಶಗಳಲ್ಲೂ ಯೋಗಕ್ಕೆ ಮಹತ್ವ ದೊರೆಯುತ್ತಿದೆ ಎಂದರು. ಯೋಗ ಪಟುಗಳಾದ ಜಯಣ್ಣ, ಪುಷ್ಪಾ, ಸಂಯುಕ್ತಾ, ದಿವ್ಯಾ, ಪ್ರಶಾಂತಿ ಶಾಲೆ ಮುಖ್ಯಸ್ಥ ರಮೇಶ್ ಇಟಗಿ, ಶಿಕ್ಷಕಿಯರಾದ ಸಂಪದಾ, ಸಂಧ್ಯಾ ಇದ್ದರು.