In Development Science Character Main Belagavi
ಬೆಳಗಾವಿ: ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನದ ಪಾತ್ರ ಪ್ರಮುಖವಾಗಿದೆ. ವಿಜ್ಞಾನದಿಂದ ಹಲವು ಆವಿಷ್ಕಾರ ಆಗಿದ್ದು, ದೇಶದ ಬೆಳವಣಿಗೆಗೆ ಸಹಾಯಕವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ ವಿಭಾಗಗಳು ಐಕ್ಯೂಎಸಿ ಮತ್ತು ಐಐಸಿ ಸಹಯೋಗದೊಂದಿಗೆ ಕಾಲೇಜಿನ ಸರ್ ಸಿ.ವಿ.ರಾಮನ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಗಣಿತಶಾಸ್ತ್ರ ಮಾದರಿ ಪ್ರದರ್ಶನ, ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಜ್ಞಾನ ವಿದ್ಯಾರ್ಥಿಗಳು ಹೊಸದನ್ನು ಕಂಡುಹಿಡಿಯಬೇಕು. ಸಮಾಜದಕ್ಕೆ ಉಪಯುಕ್ತವಾಗುವ ಸಂಶೋಧನೆ ಮಾಡಬೇಕು ಎಂದು ಪ್ರೇರೇಪಿಸಿದರು.
ಅತಿಥಿಯಾಗಿ ಆಗಮಿಸಿದ್ದ ಇಸ್ರೋ ನಿವೃತ್ತ ವಿಜ್ಞಾನಿ ಉಷಾ ಶಾಸ್ತ್ರಿ, ಭಾರತೀಯ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಸಂಶೋಧನೆಯಲ್ಲಿ ಗಣಿತದ ಅಳವಡಿಕೆ ಕುರಿತು ವಿವರಿಸಿದರು. ಇಸ್ರೋದ ಜತೆಗಿನ ಅನುಭವ ಹಂಚಿಕೊಂಡರು.
ಪ್ರಾಚಾರ್ಯೆ ಜೆ.ಎಸ್.ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಎಂ. ಶಂಕ್ರಿಕೊಪ್ಪ ಭಾಗವಹಿಸಿದರು. ಜಿಎಸ್‌ಎಸ್ ಕಾಲೇಜು ಗಣಿತ ಶಾಸ್ತ್ರ ಮುಖ್ಯಸ್ಥ ಪ್ರೊ.ಎಂ.ಎಸ್.ನಾಗಸುರೇಶ, ಗೋಗಟೆ ತಂತ್ರಜ್ಞಾನ ಮಹಾವಿದ್ಯಾಲಯದ ಡಾ.ಪಿ.ಆರ್.ಹಂಪಿಹೊಳಿ, ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಡಾ.ಆದಿನಾಥ ಉಪಾಧ್ಯ ತೀರ್ಪುಗಾರರಾಗಿ ಆಗಮಿಸಿದ್ದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಧಾ ಸರೀಕರ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಅಜಿತ ಸುತಾರ ಪರಿಚಯಿಸಿದರು. ಸೌಮ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಮೃದ್ಧಿ ಬರವೆ, ಭೂಮಿಕಾ ಟಿ. ನಿರೂಪಿಸಿದರು. ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಪಾಟೀಲ ವಂದಿಸಿದರು.
ಪದವಿಪೂರ್ವ ವಿಭಾಗದಿಂದ ರಾಜಾ ಲಖಮಗೌಡ ವಿಜ್ಞಾನ ಪದವಿಪೂರ್ವ ಕಾಲೇಜಿನ ಶೈಲಜಾ ಬಿರಾದಾರ, ಲಕ್ಷ್ಮೀ ಘಾಟಗೆ ಪ್ರಥಮ, ಕೆಎಲ್‌ಇ ಸಂಸ್ಥೆಯ ಜಿ.ಎಚ್. ಕಾಲೇಜು ಹಾವೇರಿಯ ವೈಷ್ಣವಿ ವಡ್ನಿಕೊಪ್ಪ ಮತ್ತು ತುಷಾರ ಶೆಟ್ಟಿ ದ್ವಿತೀಯ, ಸಿದ್ಧರಾಮೇಶ್ವರ ಸಂಯೋಜಿತ ಪದವಿಪೂರ್ವ ಮಹಾವಿದ್ಯಾಲಯದ ಪ್ರೀತಿ ದಳವಾಯಿ ತೃತೀಯ ಸ್ಥಾನ ಪಡೆದರು. ಪದವಿ ವಿಭಾಗದಲ್ಲಿ ಸೇಜಲ ಹನುಮಶೇಠ್ ಮತ್ತು ಹೀರ ದಂಡ್ ಪ್ರಥಮ, ಸಂದೇಶ ಗೋಜೆಕರ ಮತ್ತು ಕೋಮಲ ದೇಸುರಕರ ದ್ವಿತೀಯ ಮತ್ತು ಶ್ರೇಯಾ ಅಂಕೋಜಿ ಮತ್ತು ಮಿಸ್ಬಾ ಸೌದಾಗರ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಂದ 132 ವಿದ್ಯಾರ್ಥಿಗಳು ಭಾಗವಹಿಸಿದರು.