ಜಿಲ್ಲೆ

ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿ

ಯಾದಗಿರಿ: ಕೇಂದ್ರದಲ್ಲಿ ಬಿಜೆಪಿ ಅಕಾರಕ್ಕೆ ಬಂದ ನಂತರ ಭಾರತದ ಅಭಿವೃದ್ಧಿಯ ವೇಗ ಹಿಂದೆಂದು ಕಾಣದ ರೀತಿಯಲ್ಲಿ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ತಿಳಿಸಿದರು.

ನಗರದ ಎಸ್ಡಿಎನ್ ಹೊಟೆಲ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ಪ್ರಬುದ್ಧರ ಸಭೆ ಉದ್ಘಾಟಿಸಿ ಮಾತನಾಡಿ, ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ನಮ್ಮ ಪಕ್ಷವಲ್ಲ ವಿಶ್ವ ಬ್ಯಾಂಕ್ ಹೇಳುತ್ತಿದೆ. ಪಾಕಿಸ್ತಾನ, ಚೀನಾ ಈ ಎರಡು ದೇಶ ಹೊರತು ಪಡಿಸಿ ಉಳಿದ ಅನೇಕ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿಕೊಂಡಿವೆ ಎಂದು ತಿಳಿಸಿದರು.

ಇಡೀ ಪ್ರಪಂಚದಲ್ಲಿ ಅತಿಹೆಚ್ಚು ಕಾರು ಮತ್ತು ಬೈಕ್ ಖರೀದಿಸುತ್ತಿರುವ ದೇಶ ಆತ್ಮನಿರ್ಭರ ಭಾರತ ಯೋಜನೆಯಡಿ ದೇಶವನ್ನು ವ್ಯವಸ್ಥಿತವಾಗಿ ಕಟ್ಟುವ ಕೆಲಸ ಕೇಂದ್ರ ಸಕರ್ಾರ ಕಳೆದ 9 ವರ್ಷದಿಂದ ಮಾಡುಕೊಂಡು ಬಂದಿದೆ. ದೇಶದ ಈಶಾನ್ಯ ರಾಜ್ಯಗಳಲ್ಲಿ ಇದೀಗ ಶೇ.90 ರಷ್ಟು ಸಾವು-ನೋವಿನ ಪ್ರಮಾಣ ಕಡಿಮೆಯಾಗಿವೆ. ಮಣಿಪುರದ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯನ್ನು ಕೇಂದ್ರ ಸಕರ್ಾರ ನಿಯಂತ್ರಣ ಮಾಡಲು ಎಲ್ಲ ಕ್ರಮ ಕೈಕೊಳುತ್ತಿದೆ. ಆದರೆ ಅಲ್ಲಿ ನಡೆದ ಕೆಲ ಘಟನೆಗಳಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ನಿದರ್ಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದರು.

ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್ ಮಾತನಾಡಿ, ದೇಶದಲ್ಲಿ ಕಾಡುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳು ಕೇಂದ್ರದಲ್ಲಿ ಬಿಜೆಪಿ ಅಕಾರಕ್ಕೆ ಬಂದ ನಂತರ ನಿವಾರಣೆಯಾಗಿವೆ. ಇಂದು ದೊಡ್ಡ ದೊಡ್ಡ ಕ್ಷಿಪಣಿಗಳು, ಯುದ್ಧ ವಿಮಾನಗಳು, ರಾಕೆಟ್ಗಳು ಭಾರತದಲ್ಲಿ ನಿಮರ್ಾಣವಾಗುತ್ತಿವೆ. ಮೊದಲು ನಾವು ಯುದ್ಧ ಸಾಮಗ್ರಿಗಳನ್ನು ವಿದೇಶದಿಂದ ಖರೀದಿಸಬೇಕಿತ್ತು. ಆದರೆ, ಇಂದು ಭಾರತದ ಬಳಿಯೇ ವಿದೇಶಗಳು ಬರುತ್ತಿವೆ. ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಮಂತ್ರಿಯಾಗುವು ಅಷ್ಟೇ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾಧಕ್ಷ ಡಾ.ಶರಣಭೂಪಾಲರಡ್ಡಿ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್, ಡಾ.ವಿರಬಸವಂತರಡ್ಡಿ ಮುದ್ನಾಳ್, ಮುಖಂಡರಾದ ಅಮೀನರಡ್ಡಿ ಪಾಟೀಲ್ ಯಾಳಗಿ, ಲಲಿತಾ ಅನಪುರ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ದೆವಿಂದ್ರನಾಥ ನಾದ, ಸುರೇಶ್ ಸಜ್ಜನ್ ಇದ್ದರು.
ಗುರು ಕಾಮಾ ಸ್ವಾಗತಿಸಿದರು, ವೆಂಕಟರಡ್ಡಿ ಅಬ್ಬೆತೂಮಕೂರ ನಿರೂಪಿಸಿದರು.