ಬೇಲೂರು ಪಟ್ಟಣದ ಹೊಸನಗರ ಬಡಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಕೆ.ಸುರೇಶ್ ಮತಯಾಚಿಸಿದರು. ಮಂಜುನಾಥ್, ಗೋಪಾಲ್. ರಂಗನಾಥ್, ಬಾಬು ಇದ್ದರು. 
ಜಿಲ್ಲೆ

ಅಭಿವೃದ್ಧಿಯಲ್ಲಿ ಬೇಲೂರಿಗೆ ಸಿಗಲಿದೆ ಮೊದಲ ಸ್ಥಾನ

Hassan

ಬೇಲೂರು: ಡಬಲ್ ಇಂಜಿನ್ ಸರ್ಕಾರದಿಂದಾಗಿ ಅಭಿವೃದ್ಧಿಯಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನ ಪಡೆಯುವಂತೆ ಬೇಲೂರು ಕ್ಷೇತ್ರವೂ ಮೊದಲ ಸ್ಥಾನಕ್ಕೇರಲಿದೆ ಎಂದು ಬಿಜೆಪಿ ಅಭ್ಯರ್ಥಿ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಹೊಸನಗರ ಬಡಾವಣೆಯಲ್ಲಿ ಸೋಮವಾರ ಮತಪ್ರಚಾರ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಮೇಲೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚು ವಿಶ್ವಾಸವಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವರೇ ಬೇಲೂರಿಗೆ ಬರುವ ಸಾಧ್ಯತೆಗಳಿವೆ. ಚುನಾವಣೆಗೂ ಮುನ್ನವೇ ಬೇಲೂರಿನ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಚುನಾವಣೆ ಮುಗಿದ ನಂತರ ನಾವು ಹೆಚ್ಚಿನ ಫಲವನ್ನು ಪಡೆಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತ ಭಾರತ ವಿಶ್ವದಲ್ಲಿ ನಂಬರ್ ಒನ್ ಸ್ಥಾನದತ್ತ ಹೆಜ್ಜೆ ಹಾಕುತ್ತಿದ್ದು, ನರೇಂದ್ರ ಮೋದಿ ಅವರು ಈಗಾಗಲೇ ವಿಶ್ವ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಾಗಿದೆ. ಹೀಗಿರುವಾಗ ದೇಶ ಮತ್ತು ರಾಜ್ಯವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಅಭಿವೃದ್ಧಿ ಕಾರ್ಯದಲ್ಲಿ ಬೇಲೂರು ಕ್ಷೇತ್ರದ ಜನತೆಯ ಪಾಲೂ ಮಹತ್ತರದ್ದಾಗಿದೆ. ಸಾಮಾಜಿಕ ಕಾರ್ಯಗಳಿಗಾಗಿಯೇ ನನ್ನ ಜೀವನ ಮುಡಿಪಾಗಿದ್ದು, ಅಧಿಕಾರಕ್ಕೆ ಬಂದರೆ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡಲಾಗುವುದು ಎಂದರು.

ಹೊಸನಗರ ವಾರ್ಡಿನ ಮುಖಂಡರಾದ ಮಂಜುನಾಥ್, ಗೋಪಾಲ್. ರಂಗನಾಥ್, ಬಾಬು ಇತರರಿದ್ದರು.